






ಅಳದಂಗಡಿಯ ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಜನವರಿ 26 ರಂದು ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಶಾಲಾ ಸಂಚಾಲಕ ಫಾ. ಎಲಿಯಾಸ್ ಡಿಸೋಜ ಅವರು ಹಾಗೂ ಈ ಸಮಾರಂಭದ ಅತಿಥಿಯಾಗಿ ಆಗಮಿಸಿದ ದಯಾ ಶಾಲೆಯ ನಿರ್ದೇಶಕ ಫಾ. ವಿನೋದ್ ಮಸ್ಕರೇನ್ಹಾಸ್ ಧ್ವಜಾರೋಹಣ ನೆರವೇರಿಸಿದರು.



ಈ ಸಂದರ್ಭದಲ್ಲಿ ಅತಿಥಿಗಳು ಗಣರಾಜ್ಯ ದಿನಾಚರಣೆಯ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿನಿ ಪ್ರಾಚಿ ಗಣರಾಜ್ಯ ದಿನಾಚರಣೆಯ ಕುರಿತು ಭಾಷಣ ಮಾಡಿದರು. ಫಾ. ಎಲಿಯಾಸ್ ಡಿಸೋಜ ವಿದ್ಯಾರ್ಥಿಗಳನ್ನುದ್ದೇಶಿಸಿ ಪ್ರೇರಣಾದಾಯಕವಾಗಿ ಮಾತನಾಡಿದರು. ಈ ಆಚರಣೆಯಲ್ಲಿ ಮುಖ್ಯ ಶಿಕ್ಷಕಿ ಮೋನಿಕಾ ಡಿಸೋಜ ಶಿಕ್ಷಕರಕ್ಷಕ ಸಂಘದ ಉಪಾಧ್ಯಕ್ಷ ಸ್ಟೀವನ್ ಪಾಯ್ಸ್ , ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಅಲ್ಫೋನ್ಸ್ ರೋಡ್ರೀಗಸ್ ,ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಸಮಾರಂಭಕ್ಕೆ ಮೆರುಗು ನೀಡಿದರು. ವಿದ್ಯಾರ್ಥಿ ಸಾಕ್ಷಿ ಎಲ್ಲರನ್ನೂ ಸ್ವಾಗತಿಸಿ,ವಿದ್ಯಾರ್ಥಿನಿ ಜಾಹ್ನವಿ ನಿರೂಪಣೆ ಮಾಡಿದರು. ಆಶ್ರಿತ್ ವಂದನಾರ್ಪಣೆ ಮಾಡಿದರು.









