






ನೆಲ್ಯಾಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ಏಕೈಕ ಸಂತ ಅಲ್ಫೋನ್ಸ ಪುಣ್ಯಕ್ಷೇತ್ರ ನೆಲ್ಯಾಡಿಯಲ್ಲಿ ದಶದಿನಗಳ ಕಾಲ ಭಕ್ತಿಭಾವದಿಂದ ನಡೆಯುತ್ತಿದ್ದ ವಾರ್ಷಿಕ ಮಹೋತ್ಸವವು ಅದ್ಧೂರಿ ಹಾಗೂ ಶ್ರದ್ಧಾಪೂರ್ಣ ಸಮಾರೋಪದೊಂದಿಗೆ ಸಂಪನ್ನಗೊಂಡಿತು.ಜನವರಿ 16ರಂದು ಶುಕ್ರವಾರ ಆರಂಭಗೊಂಡ ಈ ಮಹೋತ್ಸವವು ಜನವರಿ 25ರಂದು ಆದಿತ್ಯವಾರ ಮುಕ್ತಾಯವಾಯಿತು.



ಹಬ್ಬದ ಪ್ರಧಾನ ದಿನವಾದ ಶನಿವಾರ, ವಿಶೇಷ ಪ್ರಾರ್ಥನೆಗಳು, ಧಾರ್ಮಿಕ ವಿಧಿವಿಧಾನಗಳು ಮತ್ತು ಆಕರ್ಷಕ ಶೋಭಾಯಾತ್ರೆ ಮಹೋತ್ಸವದ ವೈಭವಕ್ಕೆ ಮತ್ತಷ್ಟು ಮೆರುಗು ನೀಡಿದವು. ಶನಿವಾರ ಸಂಜೆ ನಡೆದ ಹಬ್ಬದ ಶೋಭಾಯಾತ್ರೆ ನೆಲ್ಯಾಡಿ ಪೇಟೆಯೊಳಗೆ ಭಕ್ತಿಗೀತಗಳೊಂದಿಗೆ ಸಾಗುತ್ತಾ ಸಂತ ಅಲ್ಫೋನ್ಸ ಪುಣ್ಯಕ್ಷೇತ್ರಕ್ಕೆ ಆಗಮಿಸಿತು.ಶೋಭಾಯಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಸಂತ ಅಲ್ಫೋನ್ಸಮ್ಮನವರಿಗೆ ತಮ್ಮ ಹರಕೆಗಳನ್ನು ಅರ್ಪಿಸಿ, ಆಶೀರ್ವಾದವನ್ನು ಪಡೆದುಕೊಂಡರು. ಭಕ್ತರ ಭಕ್ತಿಗೀತೆಗಳು ಹಾಗೂ ಜಪಮಾಲೆಗಳೊಂದಿಗೆ ಸಂಪೂರ್ಣ ಪ್ರದೇಶ ಭಕ್ತಿ ಸಾಗರವಾಗಿ ಪರಿವರ್ತಿತವಾಯಿತು.
ಮಹೋತ್ಸವದ ದಿನಗಳಲ್ಲಿ ವಿವಿಧ ದಿನಗಳಲ್ಲಿ ವಿಶೇಷ ನವೀನ ಪ್ರಾರ್ಥನೆಗಳು, ಧ್ಯಾನಗಳು, ಪವಿತ್ರ ಬಲಿ ಪೂಜೆಗಳು ಹಾಗೂ ಆತ್ಮೀಯ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಮಹೋತ್ಸವದಲ್ಲಿ ಭಾಗವಹಿಸಿ ಸಂತ ಅಲ್ಫೋನ್ಸಮ್ಮನ ಕೃಪೆಗೆ ಪಾತ್ರರಾದರು.ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯಕ್ಷೇತ್ರದಲ್ಲಿ ನಡೆದ ಈ ವಾರ್ಷಿಕ ಮಹೋತ್ಸವವು ಭಕ್ತರಲ್ಲಿ ನಂಬಿಕೆ, ಭಕ್ತಿ ಮತ್ತು ಆತ್ಮಿಕ ಉತ್ಸಾಹವನ್ನು ಮತ್ತೊಮ್ಮೆ ಬಲಪಡಿಸಿತು.ವಾರ್ಷಿಕ ಮಹೋತ್ಸವಕ್ಕೆ ಪುಣ್ಯ ಕ್ಷೇತ್ರದ ಫಾ. ಶಾಜಿ ಮಾತ್ಯು, ಫಾ. ಅಲೆಕ್ಸ್ ಜೋನ್ಸನ್, ಟ್ರಸ್ಟಿಗಳಾದ ಜೋನ್ಸನ್, ರಾಜೇಶ್ ರೆಜಿ ಜೋಯ್ ಕೋಶಾಧಿಕಾರಿ ಸುರೇಶ್ ಕಾರ್ಯದರ್ಶಿ ಜೆಸ್ಸಿ ಕೇ ಜೇ ಮೊದಲಾದವರು ನೇತೃತ್ವವಹಿಸಿದ್ದರು.









