ಕರಂಬಾರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

0

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕರಂಬಾರು ಇಲ್ಲಿ 77ನೇ ಗಣರಾಜ್ಯೋತ್ಸವನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಪುಷ್ಪರಾಜ್ ಎಂ ಕೆ, ಧ್ವಜರೋಹಣ ಗೈದು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಶಾಲಾ ಮಕ್ಕಳಿಗೆ ಕರಂಬಾರು ಗ್ರಾಮದ ಪ್ರಗತಿಪರ ಕೃಷಿಕರಾದ ಶಿವಾನಂದ ಹೆಗ್ಡೆ ಪರ್ಲಾಂಡ ಉಚಿತವಾಗಿ ನೀಡಿರುವ ಗುರುತಿನ ಚೀಟಿ, ಬೆಲ್ಟ್, ಟೈ ಯನ್ನು ವಿತರಿಸಿ, ದಾನಿಯಾಗಿರುವ ಶಿವಾನಂದ ಹೆಗ್ಡೆಯವರನ್ನು ಗೌರವಿಸಲಾಯಿತು. ಕಾರ್ಯಕ್ರದಲ್ಲಿ ಶಾಲಾ ಮುಖ್ಯ ಶಿಕ್ಷಕ ರಮೇಶ್ ಛಾವಣ್ ಮಾತನಾಡಿ ಶುಭಾಶಯ ಕೋರಿದರು. ಶಿಕ್ಷಕಿಯಾದ ತಸ್ಮೀಯ ಸ್ವಾಗತಿಸಿದರು.

ವೇದಿಕೆಯಲ್ಲಿ ಶಾಲಾಭಿವೃದ್ದಿ ಸಮಿತಿಯ ಸದಸ್ಯರುಗಳಾದ ಶರ್ಮಿಳ, ಶೋಭಾ ಹರೀಶ್, ಆಸ್ಮಾ, ಅಶ್ವಥ್ ಸಾಲಿಯನ್,ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಶಿಕ್ಷಕಿಯರಾದ ಸಾವಿತ್ರಿ, ಸ್ವಾತಿ, ಸಹಕರಿಸಿದರು. ಬಿಸಿ ಊಟದ ನೌಕರರಾದ ಜಯಂತಿ, ಚಂದ್ರಾವತಿ, ಉಪಸ್ಥಿತರಿದ್ದರುಜ್ಞಾನಪೀಠ ಶಿಕ್ಷಕರ ಸದಾಶಿವ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿ ಲತಾ ಧನ್ಯವಾದಗಳನ್ನು ಸಲ್ಲಿಸಿದರು.

LEAVE A REPLY

Please enter your comment!
Please enter your name here