






ಗುರುವಾಯನಕೆರೆ: ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ನಡೆಯಿತು. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರು ಧ್ವಜಾರೋಹಣ ನೆರವೇರಿಸಿ, ರಾಷ್ಟ್ರ ಪ್ರೇಮವನ್ನು ಉದ್ದೀಪಿಸುವ ಗಣರಾಜ್ಯೋತ್ಸವ ನಮ್ಮೊಳಗೆ ಸಾಮರಸ್ಯವನ್ನು ಕೂಡಾ ಬೆಳೆಸುತ್ತದೆ. ರಾಷ್ಟ್ರೀಯ ಹಬ್ಬಗಳು ನಮ್ಮಲ್ಲಿ ಐಕ್ಯತೆಯನ್ನು ಬೆಸೆಯುತ್ತವೆ ‘ ಎಂದು ಹೇಳಿದರು.





ಎನ್.ಡಿ.ಎ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಪ್ರಾಂಶುಪಾಲರಾದ ಡಾ ನವೀನ್ ಕುಮಾರ್ ಮರಿಕೆ, ಎನ್.ಡಿ.ಎ ಸಂಯೋಜಕ ಜೋಸ್ಟಮ್ ಎ.ಟಿ., ಎಕ್ಸೆಲ್ ಟೆಕ್ನೋ ಸ್ಕೂಲ್ ಸಂಯೋಜಕ ಲೀನಾ ಪ್ಲೋರಿನ್ ಶುಭ ಹಾರೈಸಿದರು. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.









