ಬೆಳ್ತಂಗಡಿ ರೋಟರೀ ಕ್ಲಬ್ ನಿಂದ ಇಂಟರ್ ಇಂಟರಾಕ್ಟ ಕ್ಲಬ್ ವಿನೂತನ ಸ್ಪರ್ಧಾ ಕಾರ್ಯಕ್ರಮ

0

ಬೆಳ್ತಂಗಡಿ ರೋಟರೀ ಕ್ಲಬ್, ಬೆಳ್ತಂಗಡಿ ತಾಲೂಕಿನ 7 ಹೈಸ್ಕೂಲ್ ಗಳಲ್ಲಿ ಸ್ಥಾಪಿಸಿರುವ ಇಂಟರಾಕ್ಟ ಕ್ಲಬ್ಬಿನ ವಿದ್ಯಾರ್ಥಿಗಳಿಗೆ ಜ.25 ರಂದು ಅಡುಗೆ ಸ್ಪರ್ಧೆ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆಗಳನ್ನು ಏರ್ಪಡಿಸಿತ್ತು. ಈ ಸ್ಪರ್ಧೆಯ ಉದ್ಘಾಟನೆಯನ್ನು ಶ್ರೀ ಧ ಮ ಕಾಲೇಜು (ಸ್ವಾಯತ್ತ) ಉಜಿರೆ ಇದರ ಪ್ರಾಂಶುಪಾಲರಾದ ಡಾ. ವಿಶ್ವನಾಥರವರು ನೆರವೇರಿಸಿ, ಇಂದಿನ ದಿನಗಳಲ್ಲಿ ಮಕ್ಕಳು ಸೃಜನಾತ್ಮಕ ರೀತಿಯಲ್ಲಿ ಆಲೋಚಿಸಬೇಕು, ತನ್ಮೂಲಕ ಹೊಸ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಸಭಾಧ್ಯಕ್ಷರಾದ ರೋಟರೀ ಕ್ಲಬ್ ಅಧ್ಯಕ್ಷ ರೊ. ಪ್ರೊ. ಪ್ರಕಾಶ ಪ್ರಭು ಬೆಳ್ತಂಗಡಿ ರೋಟರಿ ಕ್ಲಬ್ ಹೈಸ್ಕೂಲ್ ಮಕ್ಕಳಲ್ಲಿ ನಾಯಕತ್ವ ಗುಣ, ಸಾಮಾಜಿಕ ಜವಾಬ್ದಾರಿ ಹೆಚ್ಚಿಸುವ ನೆಲೆಯಲ್ಲಿ ಇಂಟರಾಕ್ಟ ಕ್ಲಬ್ ಮೂಲಕ ಹಲವು ಉಪಯುಕ್ತ ಕಾರ್ಯಕ್ರಮ ನಡೆಸಿದೆ. ಈ ಮೊದಲು ಲಯನ್ಸ ಕ್ಲಬ್ ಜತೆ ಸೇರಿ “ರೋಟಾಲಯ ಸಂಗೀತ ಸ್ಪರ್ಧೆ” ನಡೆಸಿ, ಸಾರ್ವಜನಿಕರ ಮನ ಗೆದ್ದಿತ್ತು ಎಂದರು.

ಮುಖ್ಯ ಅತಿಥಿ ಹಾಗೂ ಮುಂದಿನ ವರ್ಷದ ಅಸಿಸ್ಟೆಂಟ್ ಗವರ್ನರ್ ಡಾ. ಶಶಿಕಾಂತ ಡೋಂಗ್ರೆಯವರು ರೋಟರಿ ಕ್ಲಬ್ ನ ಅಂಗ ಸಂಸ್ಥೆಗಳಾದ ಇಂಟರಾಕ್ಟ, ರೋಟರಾಕ್ಟ ಮತ್ತು ಆರ್ .ಸಿ.ಸಿ ಗಳ ಮೂಲಕ ರೋಟರಿ ಕ್ಲಬ್ ಗಳು ಹೇಗೆ ಸೇವೆ ಸಲ್ಲಿಸುತ್ತಿದೆ ಎಂದು ವಿವರಿಸಿ, ಕಾರ್ಯಕ್ರಮಕ್ಕೆ ಶುಭ ಕೋರಿದರು. ಆ್ಯನೆಟ್ ಸಾನ್ವಿ ಈ ಕಾರ್ಯಕ್ರಮದ ಪ್ರಾರ್ಥನೆಯನ್ನು ನಡೆಸಿದರು ಹಾಗೂ ಕಾರ್ಯದರ್ಶಿ ಡಾ. ಎಂ.ಎಂ. ದಯಾಕರರು ವಂದನಾರ್ಪಣೆಗೈದರು. ಶೋಭಿತ ರವರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ತೀರ್ಪುಗಾರರಾಗಿ ಗೀತಾ ಪ್ರಕಾಶ ಪ್ರಭು, ಡಾ. ಅನಿತಾ ದಯಾಕರ್ ಹಾಗೂ ಪವಿತ್ರ ಸಂದೇಶ ರಾವ್ ರವರು ಕಾರ್ಯ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ರೋ. ಮನೋರಮ ಭಟ್, ರೊ. ಶ್ರೀಧರ ಕೆವಿ, ರೊ. ಡಾ ರಾಘವೇಂದ್ರ ಪಿದಮಲೆ, ರೊ. ಸಂದೇಶ ರಾವ್, ರೊ. ಪ್ರೊ. ರಾಧಾಕೃಷ್ಣ ಮಯ್ಯ ಭಾಗವಹಿಸಿದರು.

ಸ್ಪರ್ಧೆಗಳ ವಿಜೇತರು:- ಇಂಟರಾಕ್ಟ ವಿದ್ಯಾರ್ಥಿ ಹಾಗೂ ಹೆತ್ತವರಿಗಾಗಿ ಏರ್ಪಡಿಸಿದ ಅಡುಗೆ ಸ್ಪರ್ಧೆಯ ಪ್ರಥಮ ವಿಜೇತ ಧರ್ಮಸ್ಥಳದ ಶ್ರೀ ಧ ಮ ಆಂಗ್ಲ ಮಾಧ್ಯಮ ಇಂಟರಾಕ್ಟ ಕ್ಲಬ್ ನ ಹರ್ಷಿತ್ ಹಾಗೂ ದ್ವಿತಿಯ ವಿಜೇತೆ ಉಜಿರೆ ಶ್ರೀ ಧ ಮ ಅನುದಾನಿತ ಸೆಕಂಡರಿ ಹೈಸ್ಕೂಲ್ ಇಂಟರಾಕ್ಟ ಕ್ಲಬ್ ನ ಕುಮಾರಿ ಶಫಾ ಪಡೆದರು. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಥಮ ವಿಜೇತ ತಂಡ ಉಜಿರೆಯ ಶ್ರೀ ಧ ಮ ಆಂಗ್ಲ ಮಾಧ್ಯಮ (ಸಿ ಬಿ ಎಸ್ ಸಿ) ಇಂಟರಾಕ್ಟ ಕ್ಲಬ್, ದ್ವಿತೀಯ-ಉಜಿರೆ ಶ್ರೀ ಧ ಮ ಅನುದಾನಿತ ಸೆಕಂಡರಿ ಹೈಸ್ಕೂಲ್ ಇಂಟರಾಕ್ಟ ಕ್ಲಬ್ ಹಾಗೂ ಉಜಿರೆಯ ಶ್ರೀ ಧ ಮ ಆಂಗ್ಲ ಮಾಧ್ಯಮ (ಸ್ಟೇಟ್ ಸಿಲೆಬಸ್) ಇಂಟರಾಕ್ಟ ಕ್ಲಬ್, ತೃತೀಯ – ಧರ್ಮಸ್ಥಳದ ಶ್ರೀ ಧ ಮ ಆಂಗ್ಲ ಮಾಧ್ಯಮ ಇಂಟರಾಕ್ಟ ಕ್ಲಬ್ ಹಾಗೂ ಬೆಳ್ತಂಗಡಿಯ ಶ್ರೀ ಧ ಮ ಆಂಗ್ಲ ಮಾಧ್ಯಮ ಇಂಟರಾಕ್ಟ ಕ್ಲಬ್.

LEAVE A REPLY

Please enter your comment!
Please enter your name here