ಬೆಳ್ತಂಗಡಿ ರೋಟರೀ ಕ್ಲಬ್ ವತಿಯಿಂದ ನಂದ ಗೋಕುಲ ಗೋಶಾಲೆಗೆ ನೂತನ ಕಟ್ಟಡ ಹಸ್ತಾಂತರ

0

ಕಳೆಂಜ: ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್ (ರಿ) ಇದರ ವತಿಯಿಂದ ನಡೆಸಲ್ಪಡುವ ಕಳೆಂಜ ಗ್ರಾಮದಲ್ಲಿರುವ ನಂದ ಗೋಕುಲ ಗೋಶಾಲೆಗೆ, ಕ್ಯಾನ್ ಫಿನ್ ಹೋಮ್ಸ (ಲಿ) ಇವರು ಬೆಳ್ತಂಗಡಿ ರೋಟರೀ ಕ್ಲಬ್ ಮೂಲಕ, ಪಶು ಸಾಕಣೆಗೆ ಅನುಕೂಲವಾಗುವಂತೆ, 18 ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡವನ್ನು ಕಟ್ಟಿಸಿಕೊಟ್ಟಿದ್ದು, ಈ ನೂತನ ಕಟ್ಟಡದ ಹಸ್ತಾಂತರ ಕಾರ್ಯಕ್ರಮ ಜ.24 ರಂದು ನಡೆಯಿತು.

ಈ ಕಟ್ಟಡದ ಉದ್ಘಾಟನೆಯನ್ನು ಕ್ಯಾನ್ ಫಿನ್ ಹೋಮ್ಸನ ಡಿಜಿಎಂ ಪ್ರಶಾಂತ ಜೋಷಿ ನೇರವೇರಿಸಿ, ಅಪಘಾತಕ್ಕೆ ಒಳಗಾಗಿ ಅಥವ ನಿರ್ಲಕ್ಷಕ್ಕೊಳಗಾಗಿ ಅನಾಥ ಸ್ಥಿತಿಯಲ್ಲಿರುವ ಹಸು, ಎಮ್ಮೆ ಕೋಣಗಳ ಆಶ್ರಯಕ್ಕೆಂದು ಕ್ಯಾನ್ ಫಿನ್ ಹೋಮ್ಸ ನೆರವು ನೀಡಿದ ನೆರವು ಸಾರ್ಥಕವಾಗಿ ಬಳಕೆಯಾದುದರ ಬಗ್ಗೆ ಹರ್ಷ ವ್ಯಕ್ತ ಪಡಿಸಿದರು. ಅಧ್ಯಕ್ಷ ಸ್ಥಾನ ವಹಿಸಿದ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ರೊ. ಪ್ರೊ ಪ್ರಕಾಶ ಪ್ರಭುಗಳು ರೋಟರಿ ಕ್ಲಬ್ ಮೇಲೆ ವಿಶ್ವಾಸವಿರಿಸಿ, ಸೇವಾ ಕಾರ್ಯಕ್ಕೆ ಧನ ಸಹಾಯ ಮಾಡುತ್ತಿರುವ, ಕ್ಯಾನ್ ಫಿನ್ ಹೋಮ್ಸಗಳಂತಹ ಅನೇಕ ಸಂಸ್ಥೆಗಳಿಗೆ ತಾವು ಚಿರ ಖುಣಿಗಳಾಗಿದ್ದೇವೆ ಎಂದರು.

ಮುಖ್ಯ ಅತಿಥಿಗಳಾಗಿ ರೋಟರೀ ಕ್ಲಬ್ ನ ಪ್ರಾಜೆಕ್ಟ ಚೆಯರ್ ಮ್ಯಾನ್ ರೊ. ಅಬೂಬಕ್ಕರ್ ಯು. ಎಚ್, ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ (ರಿ) ಇದರ ಸ್ಥಾಪಕ ಅಧ್ಯಕ್ಷ ಡಾ. ಎಂ ಎಂ ದಯಾಕರ್ ಮತ್ತು ಇತರ ಪದಾಧಿಕಾರಿಗಳು ಭಾಗವಹಿಸಿದರು.ಟ್ರಸ್ಟಿನ ಸ್ಥಾಪಕ ಅಧ್ಯಕ್ಷ ಡಾ ಎಂ ಎಂ ದಯಾಕರರು ಪ್ರಾಸ್ತವಿಕ ನುಡಿಗಳನ್ನು ನುಡಿದು ಎಲ್ಲರನ್ವೂ ಸ್ವಾಗತಿಸಿದರು. ಟ್ರಸ್ಟ್ ಕಾರ್ಯದರ್ಶಿ ನವೀನ್ ನೆರಿಯ ರವರು ವಂದನಾರ್ಪಣೆಗೈದರು.

ಕಾರ್ಯಕ್ರಮದಲ್ಲಿ ರೋಟರಿ ಸದಸ್ಯರಾದ ರೊ. ಶ್ರೀಧರ್ ಕೆ.ವಿ, ರೊ. ಅನಂತ ಭಟ್, ರೊ. ಅಬೂಬಕ್ಕರ್, ರೊ. ಸಂದೇಶ ರಾವ್, ರೊ ರಾಘವೇಂದ್ರ ಪಿದಮಲೆ, ಶ್ರೀ ಸ್ವಾಮಿ ವಿವೇಕಾನಂದ ಸೇವಾಶ್ರಮ ಟ್ರಸ್ಟ ಉಪಾಧ್ಯಕ್ಷ ನಾರಾಯಣ ಗೌಡ, ಸದಸ್ಯರಾದ ರಮೇಶ ಪ್ರಭು, ಪದ್ಮನಾಭ ಶೇರಿಗಾರ್, ರಮೇಶ ಧರ್ಮಸ್ಥಳ, ಶ್ರೀ ಕುಮಾರ್ ನಾಥ ಶೆಟ್ಟಿ, ರಾಘವೇಂದ್ರ ಹೂಂಕ್ರೊಟ್ಟು, ದಿನೇಶ್ ಚಾರ್ಮಾಡಿ, ಮೆನೇಜರ್ ಆನಂದ ಯು, ಕವಿತ, ದೀಪಿಕಾ, ಸುಪರ್ ವೈಸರ್ ಕಾರ್ತಿರಾಜ್ ಭಾಗವಹಿಸಿದರು

LEAVE A REPLY

Please enter your comment!
Please enter your name here