






ನೆರಿಯ: ಅಪ್ಪೆಲ ಉಮಾಪಂಚಲಿಗೇಶ್ವರ ದೇವಸ್ಥಾನ ವಾರ್ಷಿಕ ಉತ್ಸವ ಜ. 23 ರಿಂದ 25 ವರೆಗೆ ನಡೆಯಿತು. ಜ.23 ರಂದು ತೋರಣ ಮುಹೂರ್ತ, ಧಾರ್ಮಿಕ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಊರಿನ ಕಲಾವಿದರಿಂದ ಸಾಂಸ್ಕೃತಿಕ ವೈಭವ ಹಾಗೂ ಕಾಪು ರಂಗತರಂಗ ಕಲಾವಿದರಿಂದ ಶೋಭಾಜಿ ನಾಟಕ ನಡೆಯಿತು.



ಜ24 ರಂದು ಗಣಹೋಮ ಏಕಾದಶ ರುದ್ರಾಭಿಷೇಕ ಹಾಗೂ ಭಜನಾ ಕಾರ್ಯಕ್ರಮ ಮದ್ಯಾಹ್ನ ದೇವರಿಗೆ ಮಹಾ ಪೂಜೆ ನಡೆಯಿತು. ಸಂಜೆ ದೀಪಾರಾಧನೆ ರಂಗ ಪೂಜೆ ಉತ್ಸವ ನೃತ್ಯಬಳಿ ಬಟ್ಟಲು ಕಾಣಿಕೆ ಪ್ರಸಾದ ವಿತರಣೆ ಕಾರ್ಯಕ್ರಮ, ಜ.25 ರಂದು ರುದ್ರಗುಳಿಗ ನೇಮೋತ್ಸವ ಮೂಲಕ ವಾರ್ಷಿಕ ಉತ್ಸವ ಸಂಪನ್ನಗೊಂಡಿತು.









