ಕೇಳ- ಕಾಶಿಪಟ್ಣ ಪಂಚಲಿಂಗೇಶ್ವರ ದೇವಸ್ಥಾನದರಾಜಗೋಪುರದ ಉದ್ಘಾಟನೆ

0

ಬೆಳ್ತಂಗಡಿ: ಕೇಳ- ಕಾಶಿಪಟ್ಣ ಪಂಚಲಿಂಗೇಶ್ವರ ದೇವಸ್ಥಾನದ ರಾಜಗೋಪುರದ ಉದ್ಘಾಟನೆ ಹಾಗೂ ಸಭಾಭವನ ಮತ್ತು ಅನ್ನಛತ್ರ ಕಟ್ಟಡಗಳ ಶಿಲಾನ್ಯಾಸ ಸಮಾರಂಭ ಜ.25ರಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾಡಿದರು. ಬಳಿಕ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕೇಳ -ಕಾಶಿಪಟ್ಣ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಹತ್ತು ಲಕ್ಷ ಹಣ ಬಿಡುಗಡೆ ಯಾಗಿದೆ. ಇನ್ನೂ 15 ಲಕ್ಷ ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇನೆ. ದೇವಸ್ಥಾನದ ಅಭಿವೃದ್ಧಿಗೆ ಇನ್ನೂ ಹೆಚ್ಚು ಅನುದಾನ ಬೇಕಾದರೆ ಕೊಡಿಸುವಂತಹ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಕಟೀಲು ಕ್ಷೇತ್ರದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀ ಅನಂತಪದ್ಮನಾಭ ಅಸ್ರಣ್ಣರು ಆಶೀರ್ವಚನ ನೀಡಿದರು.ಆಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲರು ದೀಪ ಪ್ರಜ್ವಲನೆ ಮಾಡಿದರು.

ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ ಪ್ರಧಾನ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ.ಅನಂತ ಅಸ್ರಣ್ಣರು, ಪ್ರಮುಖರಾದ ವಿಕ್ರಂ ಕುಮಾರ್, ನಾರಾಯಣ ಭಟ್, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಶಂಕರ್ ಭಟ್ ಬಾಲ್ಯ, ಸದಾನಂದ ಪೂಜಾರಿ, ಸುನಂದ ಎಸ್ ಶೆಟ್ಟಿ, ವಿನೋಧರ ಸಾಲ್ಯಾನ್, ಮಮತಾ ಡಿ ಪೂಜಾರಿ, ರಾಘವೇಂದ್ರ ನಾಯ್ಕ, ಲೋಕಯ್ಯ ಪೂಜಾರಿ, ಕಾಶಿಪಟ್ಣ ಪಂಚಾಯತ್ ಸದಸ್ಯ ಸುಶೀಲ, ಗ್ರಾಮೀಣಾಭಿವೃದ್ಧಿ ಯೋಜನಾಧಿಕಾರಿ ಶಶಿಕಲಾ ಉಪಸ್ಥಿತರಿದ್ದರು.

ಕಾಶಿಪಟ್ಣ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕಾಶಿಪಟ್ಣ ಸ್ವಾಗತಿಸಿ, ಶಿಕ್ಷಕ ದೇವುದಾಸ್ ನಾಯಕ್ ನಿರೂಪಿಸಿ, ವ್ಯವಸ್ಥಾಪನ ಸಮಿತಿಯ ಸದಸ್ಯ ಶಂಕರ್ ಭಟ್ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here