ಜ. 30-ಫೆ. 1ರವರೆಗೆ ಸವಣಾಲು ಶ್ರೀ ದುರ್ಗಾಕಾಳಿಕಾಂಬ ಕ್ಷೇತ್ರ ಕಾಳಿಬೆಟ್ಟದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ

0

ಬೆಳ್ತಂಗಡಿ: ಸವಣಾಲು ಗ್ರಾಮದ ಶ್ರೀ ದುರ್ಗಾಕಾಳಿಕಾಂಬ ಕ್ಷೇತ್ರ, ಕಾಳಿಬೆಟ್ಟದಲ್ಲಿ ಜ. 30ರಿಂದ ಫೆ.1ರವರೆಗೆ ವಾರ್ಷಿಕ ಜಾತ್ರಾ ಮಹೋತ್ಸವ ಜರಗಲಿದೆ.

ವೈದಿಕ ಕಾರ್ಯಕ್ರಮಗಳು ವಿಧಿವತ್ತಾಗಿ ಜರಗಲಿರುವುದು ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಆ ಪ್ರಯುಕ್ತ ತಾವೆಲ್ಲರೂ ಶ್ರೀ ಕ್ಷೇತ್ರಕ್ಕೆ ಆಗಮಿಸಿ, ಶ್ರೀ ದೇವಿಯ ದರ್ಶನಗೈದು, ಪ್ರಸಾದವನ್ನು ಸ್ವೀಕರಿಸಿ, ಶ್ರೀ ದುರ್ಗಾಕಾಳಿಕಾಂಬ ದೇವಿಯ ದಿವ್ಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುತ್ತೇವೆ ಎಂದು ಕ್ಷೇತ್ರದ ಆಡಳಿತ ಮಂಡಳಿ ತಿಳಿಸಿದೆ.

ಜಾತ್ರಾ ಮಹೋತ್ಸವದ ವಿಶೇಷ ಸೇವೆಗಳು: ವಿಶೇಷ ಅನ್ನದಾನ ಸೇವೆ (ಜಾತ್ರೋತ್ಸವದ 3 ದಿನ) – 30,000/-, ಮಹಾ ಅನ್ನದಾನ ಸೇವೆ – 10,000/-, ಅನ್ನದಾನ ಸೇವೆ – 5,000/-, ಒಂದು ದಿನದ ಪೂಜೆ – 1,500/-, ಅಲಂಕಾರ ಸೇವೆ (1,000/-ದಿಂದ), ರಂಗಪೂಜೆ – 1,000/- ಹಾಗೂ ಸಂಜೆ 6 ಗಂಟೆಯಿಂದ ಅಂಗನವಾಡಿ ಕೇಂದ್ರ, ಗುತ್ತಿನ ಬೈಲು ಮತ್ತು ನಡ್ತಿಕಲ್ಲು ಹಾಗೂ ಊರವರಿಂದ – ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 7:00 ರಿಂದ ಮಂಗಳೂರು ಹೆಜ್ಜೆನಾದ ತಂಡದವರಿಂದ ಗಾನ-ನೃತ್ಯ-ವೈಭವ ನಡೆಯಲಿದೆ.

LEAVE A REPLY

Please enter your comment!
Please enter your name here