ಸುಲ್ಕೇರಿ: ನಿವೃತ್ತ ಶಿಕ್ಷಕ ಕೆ. ಕೊರಗಪ್ಪ ಪೂಜಾರಿ ನಿಧನ

0

ಬೆಳ್ತಂಗಡಿ: ಸುಲ್ಕೇರಿ ಗ್ರಾಮದ ಅಂಬಿಕಾ ಸದನ ನಿವಾಸಿ ನಿವೃತ್ತ ಶಿಕ್ಷಕ ಕೆ.ಕೊರಗಪ್ಪ ಪೂಜಾರಿ (80ವ) ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಸುಮಾರು 20 ವರ್ಷಗಳ ಕಾಲ ಉಜಿರೆ, ಕಟ್ಟೆ, ನಾರವಿ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ಸಲ್ಲಿಸಿ ನಿವೃತ್ತಿಗೊಂಡಿದ್ದರು. ಮೃತರು ಪತ್ನಿ ವೀಣಾ, ಮಕ್ಕಳಾದ ಡಾ.ಮನೋಜ್ ಕುಮಾ‌ರ್, ಡಾ.ಶರ್ಮಿಲಾ ಭೋಜ ಪೂಜಾರಿ ಹಾಗೂ ಪ್ರಮೀಳಾ ಕೃಷ್ಣ ಕುಮಾರ್, ಸೊಸೆ ಶ್ರೀಲತಾ, ಮೊಮ್ಮಕ್ಕಳಾದ ತನ್ವಿ ಹಾಗೂ ಸಾನ್ವಿ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here