ಮಲೆಬೆಟ್ಟು: “ಹಿಂದೂ ಸಂಗಮ” ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಕೊಯ್ಯೂರು: ಬೆಳ್ತಂಗಡಿ ಹಿಂದೂ ಸಂಗಮ ಅಯೋಜನ ಸಮಿತಿ, ಲಾಯಿಲ ಮಂಡಲ (ಕೊಯ್ಯೂರು ಮತ್ತು ಲಾಯಿಲ) ಹಿಂದೂ ಸಂಗಮ ನಿರ್ವಹಣಾ ಸಮಿತಿ ಫೆ. 1ರಂದು ಮಲೆಬೆಟ್ಟು ಶ್ರೀ ವನದುರ್ಗ ದೇವಸ್ಥಾನದಲ್ಲಿ ನಡೆಯುವ “ಹಿಂದೂ ಸಂಗಮ” ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜ. 16ರಂದು ಮಲೆಬೆಟ್ಟು ಶ್ರೀ ವನದುರ್ಗ ದೇವಸ್ಥಾನದಲ್ಲಿ ನಡೆಯಿತು.

ಆಮಂತ್ರಣ ಪತ್ರಿಕೆಯನ್ನು ಹಿಂದೂ ಸಂಗಮ ತಾಲೂಕು ಆಯೋಜನ ಸಮಿತಿ ಸಂಯೋಜಕ ಅನಿಲ್ ಕುಮಾರ್ ಯು., ಜಯರಾಮ ಭಟ್ ಕೊರ್ಯರ್, ಚಂದ್ರಶೇಖರ ಆಚಾರ್ಯ ಕನ್ನಾಜೆ ಬಿಡುಗಡೆಗೊಳಿಸಿದರು. ಲಾಯಿಲ ಮಂಡಲ ಸಂಯೋಜಕ ಬಿ.ಕೆ. ಧನಂಜಯ ರಾವ್ ದರ್ಪಿಂಜೆ, ಸಹ ಸಂಯೋಜಕ ಚಂದ್ರಶೇಖರ ಸಾಲಿಯಾನ್ ಕೊಯ್ಯೂರು, ಅಶೋಕ್ ಭಟ್ ಕೊಯ್ಯೂರು, ರಾಷ್ಟ್ರೀಯ ಸ್ವಯಂಸೇವಕ ಸಂಘ ಪುತ್ತೂರು ಜಿಲ್ಲಾ ಸೇವಾ ಪ್ರಮುಖ್ ವಿಜಯ್ ಅರಳಿ, ಬೆಳ್ತಂಗಡಿ ತಾಲೂಕು ಸಂಘ ಚಾಲಕ ಗಣೇಶ್ ಭಟ್ ಕಾಂತಾಜೆ, ತಾಲೂಕು ಆಯೋಜನಾ ಸಮಿತಿ ಪದಾಧಿಕಾರಿಗಳು, ಮಂಡಲ ನಿರ್ವಹಣಾ ತಂಡದ ಪ್ರಮುಖರು ಮತ್ತು ಎರಡು ಗ್ರಾಮದ ಹಿಂದೂ ಬಂಧುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here