







ಬಳಂಜ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಪ್ರೌಢಶಾಲಾ ಶೈಕ್ಷಣಿಕ ಅಭಿವೃದ್ದಿಗಾಗಿ ಬಳಂಜ ಶಿಕ್ಷಣ ಟ್ರಸ್ಟ್ ಕಳೆದ ಎರಡು ವರ್ಷಗಳಿಂದ ಶ್ರಮಿಸುತ್ತಾ ಬಂದಿದ್ದು ಗೌರವ ಶಿಕ್ಷಕರಿಗೆ ವೇತನ, ಕ್ರೀಡಾಂಗಣ ಅಭಿವೃದ್ದಿ, ಸೊಲಾರ್ ಅಳವಡಿಕೆ, ರಂಗಮಂದಿರ ಮುಂಬಾಗ ಶೀಟ್ ಅಳವಡಿಕೆ, ಎರಡು ಕೊಠಡಿಗಳ ನವೀಕರಣ ಇನ್ನಿತರ ಹಲವಾರು ಅಬಿವ್ರುದ್ದಿ ಕಾರ್ಯಗಳನ್ನು ಮಾಡುತ್ತಿದೆ.


ಮುಂದಿನ ಶೈಕ್ಷಣಿಕ ಅವದಿಯಲ್ಲಿ ಉಚಿತ ಕಂಪ್ಯೂಟರ್ ಶಿಕ್ಷಣ, ಉಚಿತ LKG-UKG ಶಿಕ್ಷಣ, ಸೇರಿ ನಾಲ್ಕು ಗೌರವ ಶಿಕ್ಷಕರಿಗೆ ಗೌರವಧನ ನೀಡುವ ಬಗ್ಗೆ ಸೋಮವಾರ ನಡೆದ ಟ್ರಸ್ಟ್ ಸಬೆಯಲ್ಲಿ ನಿರ್ಣಯಿಸಲಾಯಿತು. ಟ್ರಸ್ಟ್ ನ ಸೇವಾಕಾರ್ಯಕ್ಕೆ ಒಂದು ತಿಂಗಳ ಗೌರವಧನ 40,000 ರೂ.ಗಳನ್ನು ಬಳಂಜ ಶಾಲಾ 84-85ನೇ ಸಾಲಿನ ಹಳೆವಿದ್ಯಾರ್ಥಿ ಗ ತಂಡ ನೀಡಲು ಮುಂದೆ ಬಂದಿದ್ದು ಇದರಂತೆ ಮೊದಲ ಗೌರವಧನ 40,000 ರೂ.ಗಳನ್ನು ಬಳಂಜ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷ ಮನೋಹರ್ ಬಳಂಜರಿಗೆ ಹಳೆ ವಿದ್ಯಾರ್ಥಿಗಳಾದ ಅನಂತ್ ರಾಮ್ ಹೊಳ್ಳ ನೇತೃತ್ವದ ತಂಡ ರವೀಂದ್ರ ಬಿ. ಅಮೀನ್, ನಯನ್ ಕುಮಾರ್, ಮೋಹನ್ ಕೆ., ಸಾಂತಪ್ಪ ದೇವಾಡಿಗ, ಜಯಾನಂದ ಪೂಜಾರಿ, ಹಸ್ತಾಂತರಿಸಿದರು.
ಬಳಂಜ ಶಿಕ್ಷಣ ಟ್ರಸ್ಟ್ ನ ಉಪಾಧ್ಯಕ್ಷ ವಿನು ಬಳಂಜ, ಕಾರ್ಯದರ್ಶಿ ರತ್ನರಾಜ್ ಜೈನ್ ಪೇರಂದಬೈಲ್, ಟ್ರಸ್ಟಿಗಳಾದ ಸಂತೋಷ್ ಕುಮಾರ್ ಕಾಪಿನಡ್ಕ, ರಾಕೇಶ್ ಹೆಗ್ಡೆ ಬಳಂಜ, ಪ್ರಮೋದ್ ಜೈನ್, ಸತೀಶ್ ಕೆ, ಮಹಿಳಾ ಮಂಡಲದ ಅದ್ಯಕ್ಷೆ ಚೇತನಾ ಜೈನ್, ಯುವಕ ಮಂಡಲದ ಅದ್ಯಕ್ಷ ಸುಕೇಶ್ ಹಾನಿಂಜ, ಶಾಲಾಬಿವ್ರುದ್ದಿ ಸಮಿತಿ ಅಧ್ಯಕ್ಷ ರತ್ನಾಕರ್ ಪೂಜಾರಿ, ಶಿಕ್ಷಕರಾದ ಕಿರಣ್, ಮಲ್ಲಿಕಾರ್ಜುನ, ಶೈನಿ ರೀಮಾ ಕ್ರಾಸ್ತಾ ಮತ್ತು ಉದ್ಯಮಿ ಪ್ರವೀಣ್ ಲಾಂತ್ಯಾರ್ ಉಪಸ್ಥಿತರಿದ್ದರು.









