









ಉಜಿರೆ: ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಖ್ಯಾತ ಉರಗ ಪ್ರೇಮಿ ಸ್ನೇಕ್ ಜಾಯ್ ಅವರಿಗೆ ಸುದ್ದಿಯ ವರದಿಯ ಬಳಿಕ ಜ.18ರಂದು ಮುಂಡತ್ತೋಡಿ ಗೆಳೆಯರ ಬಳಗದಿಂದ ರೂ. 5000 ಸಹಾಯ ಧನ ನೀಡಲಾಯಿತು. ಗೌರವಾಧ್ಯಕ್ಷ ಗಣೇಶ್ ಡಿ.ಪಿ., ಅಧ್ಯಕ್ಷ ವೆಂಕಪ್ಪ(ರವಿ), ಕೋಶಾಧಿಕಾರಿ ಸುವಿತ್ ಹಾಗೂ ಸದಸ್ಯರಾದ ಅಶೋಕ್ ಮತ್ತು ಪ್ರದೀಪ್ ಉಪಸ್ಥಿತರಿದ್ದರು. ಸಂಘಟನೆಯ ಚನನ, ಪ್ರಶಾಂತ್, ರಮೇಶ್, ಜಯರಾಜ್, ಸಂತೋಷ್ ಬೈರ್ನೋಟ್ಟು, ವಿಶ್ವನಾಥ ನಾಯಕ್ ಸಹಕರಿಸಿದರು.









