ಶತಾಯುಷಿ ಲಕ್ಷ್ಮಿ ಕರ್ಲೋಡಿ ಅವರಿಗೆ ನುಡಿನಮನ: ಸಾರ್ಥಕ ಬದುಕು ನಡೆಸಿದ ಬಗ್ಗೆ ಮೆಲುಕು

0

ಬಂದಾರು: ಇಲ್ಲಿಯ ಪೆರ್ಲಬೈಪಾಡಿ ಕರ್ಲೋಡಿಯ ಮನೆತನದ ಶತಾಯುಷಿ ಲಕ್ಷ್ಮಿ(105) ಡಿ.31ರಂದು ದೈವಾದೀನರಾಗಿದ್ದರು.

ಈ ಹಿನ್ನೆಲೆಯಲ್ಲಿ ಜ.17ರಂದು ಅವರ ಕರ್ಲೋಡಿ ಮನೆಯಲ್ಲಿ ನುಡಿನಮನ ಕಾರ್ಯಕ್ರಮ ನಡೆಯಿತು.

ನೆಹರೂ ಮೆಮೋರಿಯಲ್ ಕಾಲೇಜ್‌ನ ನಿವೃತ್ತ ಪ್ರಾಂಶುಪಾಲ ಪೂವಪ್ಪ ಕಣಿಯೂರು ಅವರು ಶತಾಯುಷಿ ಲಕ್ಷ್ಮೀ ಅವರ ನುಡಿನಮನ ಕಾರ್ಯಕ್ರಮ ಮುನ್ನಡೆಸಿ ಲಕ್ಷ್ಮೀಯವರ ಜೀವನ, ಆದರ್ಶ ಬದುಕು, ಕೃಷಿ ಜೀವನ, ಶತಾಯುಷಿ ಆಗಿ ಆರೋಗ್ಯ ಕಾಪಾಡಿದ ರೀತಿ, ಎಲ್ಲರನ್ನು ಪ್ರೀತಿ ಪ್ರೇಮದಿಂದ ಮಾತಾಡುತ್ತಿದ್ದ ರೀತಿ, ಜೀವನ ಮೌಲ್ಯಗಳನ್ನು ಹೇಳಿ, ಪಾಲನೆ ಮಾಡಿದ ರೀತಿಯನ್ನು ತಿಳಿಸಿದರು.

ಬಂದಾರು ಗ್ರಾಮದ ಕರ್ಲೋಡಿ ಮನೆಯ ಅಣ್ಣಿಗೌಡ ಮತ್ತು ಭುವನೇಶ್ವರಿ, ರಮೇಶ್ ಗೌಡ ಮತ್ತು ಸುಶೀಲ, ಕಣಿಯೂರು ಗ್ರಾಮದ ಕುರಿಯಾಡಿ ಮನೆಯ ಲೋಕಮ್ಮ, ಮೊಗ್ರು ಗ್ರಾಮದ ಅರ್ತಿದಡಿ ಮನೆಯ ಮೋನಮ್ಮ, ಬಂದಾರು ಗ್ರಾಮದ ಪಾರೊಟ್ಟು ಮನೆಯ ಶೀಲಾ, ಮೊಗ್ರು ಗ್ರಾಮದ ಗೌಂಡತ್ತಿಗೆ ಮನೆಯ ಕುಸುಮಾವತಿ ಮತ್ತು ಲಕ್ಷ್ಮಣಗೌಡ, ಧರ್ಮಸ್ಥಳ ಗ್ರಾಮದ ನೇತ್ರಾವತಿ ಮನೆಯ ಗಿರಿಜಾ, ಬೆಳಾಲು ಗ್ರಾಮದ ಮೈರಾಜೆ ಮನೆಯ ಕಮಲ ಮತ್ತು ಕೃಷ್ಣಪ್ಪಗೌಡ, ಬಂದಾರು ಗ್ರಾಮದ ಗಿಳಿಕುಕ್ಕು ಮನೆಯ ಪ್ರೇಮಾ ಮತ್ತು ಶೀನಪ್ಪ ಗೌಡ, ಬೇಲೂರಿನ ಹೆಗ್ಗದ್ದೆ ಗ್ರಾಮ ಕಾಲಭೈರವೇಶ್ವರ ನಿಲಯದ ಬೇಬಿ ಮತ್ತು ಜಗದೀಶ್, ಕುಟುಂಬಸ್ಥರು, ನೆಂಟರು ಹಾಗೂ ಪ್ರೀತಿ ಪಾತ್ರರಾದ ಊರಿನ ಪರ ಊರಿನ ನಾಗರಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here