ಉಜಿರೆ ಗ್ರಾಮದ ಕೆಲವೆಡೆ ಚಿರತೆ ಸಂಚರಿಸಿದ ಕುರುಹು ಪತ್ತೆ: ಕಾಣೆಯಾದ ನಾಯಿಗಳು-ಗ್ರಾಮಸ್ಥರಲ್ಲಿ ಆತಂಕ

0

ಉಜಿರೆ: ಗ್ರಾಮದ ಇಜ್ಜಳ, ಇಚ್ಚಿಲ, ಗೋ ಆಸ್ಪತ್ರೆಯ ಪರಿಸರದಲ್ಲಿ, ಅತ್ತಾಜೆ ಕೆರೆಯ ಸುತ್ತಮುತ್ತಲಿನ ಪರಿಸರ, ಉಜಿರೆ ತ್ಯಾಜ್ಯ ವಿಲೇವಾರಿ ಘಟಕದ ಪರಿಸರದಲ್ಲಿ ಚಿರತೆ ಸಂಚರಿಸಿದ ಕುರುಹು ಪತ್ತೆಯಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.

ಇಲ್ಲಿಯ ರಬ್ಬರ್ ತೋಟದಲ್ಲಿ ಚಿರತೆಯ ಹೆಜ್ಜೆ ಗುರುತು ಹಾಗೂ ಪರಚಿರುವ ಕುರುಹುಗಳು ಕಂಡುಬಂದಿದ್ದು ಅದಕ್ಕೆ ಸಾಕ್ಷಿಯಾಗಿ ಸಾಕು ನಾಯಿಗಳು ಇದ್ದಕ್ಕಿದ್ದಂತೆ ಕಾಣೆಯಾಗಿರುವುದಕ್ಕೆ ಚಿರತೆಯೇ ಕಾರಣ ಎಂದು ಮೇಲ್ನೋಟಕ್ಕೆ ಗೋಚರಿಸುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here