






ಮರೋಡಿ: 14ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ಮಂಡಲ ಪೂಜೆ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಶ್ರೀ ಶನೀಶ್ವರ ಪೂಜೆ ಮತ್ತು ಸಂಜೆ ದೈವಗಳ ಗಗ್ಗರ ಸೇವೆಯು ಶ್ರೀ ಗುರು ಮೈದಾನ, ಪಿಜತ್ತಕಟ್ಟೆ ಮರೋಡಿಯಲ್ಲಿ ನಡೆಯಿತು.


ಜ.8ರಂದು ಬೆಳಿಗ್ಗೆ ಗಣಹೋಮ ಸಂಜೆ ಶ್ರೀ ಸತ್ಯನಾರಾಯಣ ಪೂಜೆ, ಜ.9ರಂದು ಬೆಳಿಗ್ಗೆ ಚಪ್ಪರ ಮುಹೂರ್ತ, ಶ್ರೀ ಶಬರಿಮಲೆ ಯಾತ್ರೆ ಸ್ವಾಮಿಗಳ ಇರುಮುಡಿ ಕಟ್ಟುವುದು, ಮಧ್ಯಾಹ್ನ ಶರಣು ಘೋಷ, ಹರೀಶ್ ಗುರುಸ್ವಾಮಿ ಮತ್ತು ಪ್ರಕಾಶ್ ಗುರುಸ್ವಾಮಿ ಅವರ ನೇತೃತ್ವದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ದೈವಗಳ ಭಂಡಾರ, ಸಾರ್ವಜನಿಕ ಶ್ರೀ ಶನೀಶ್ವರ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ರಾತ್ರಿ ಶ್ರೀ ಧೂಮಾವತಿ ದೈವದ ಗಗ್ಗರ ಸೇವೆ ಸಾರ್ವಜನಿಕ ಅನ್ನಸಂತರ್ಪಣೆ, ಶ್ರೀ ಅಣ್ಣಪ್ಪ ಪಂಜುರ್ಲಿ ದೈವದ ಗಗ್ಗರ ಸೇವೆ ನಡೆಯಿತು.
ಜ. 10ರಂದು ಬೆಳಿಗ್ಗೆ ಶರಣು ಘೋಷ, ಮಹಾಪೂಜೆ, ಪ್ರಸಾದ ವಿತರಣೆ ನಂತರ ಯಾತ್ರಾರ್ಥಿಗಳು ಶಬರಿಮಲೆಗೆ ಹೊರಡಿದರು.









