






ಬೆಳ್ತಂಗಡಿ: ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನಕ್ಕೆ ಭಾರತೀಯ ಜೀವ ವಿಮಾ ನಿಗಮ, ಬೆಳ್ತಂಗಡಿ ಸಂಪರ್ಕ ಶಾಖೆಯಿಂದ ಗೋಡೆ ಗಡಿಯಾರ ಕೊಡುಗೆಯನ್ನು ಮಕರ ಸಂಕ್ರಮಣದಂದು ಜ. 14ರಂದು ದೇವಸ್ಥಾನದ ಮ್ಯಾನೇಜರ್ ಸುಬ್ರಾಯ ಡೋಂಗ್ರೆ ಅವರಿಗೆ ಹಸ್ತಾಂತರ ಮಾಡಲಾಯಿತು.



ಬೆಳ್ತಂಗಡಿ ಉಪಗ್ರಹ ಶಾಖಾಧಿಕಾರಿ ಕೆ. ಪ್ರಕಾಶ, ಅಭಿವೃದ್ಧಿ ಅಧಿಕಾರಿಗಳಾದ ವಿಶ್ವೇಶ್ವರ ಎಂ., ಉದಯಶಂಕರ ಕೆ., ರಾಘವೇಂದ್ರ ಟಿ.ಡಿ, ವಿನಯ್ ಕುಮಾರ್ ಎಸ್ ನ್ಯಾಮಗೌಡರ್, ಸಂದೀಪ ಅರಮನಿ, ಅಧಿಕಾರಿಗಳಾದ ಕೇಶವ ಎಂ., ಹರಿಶ್ಚಂದ್ರ ಹೆಗಡೆ, ಪ್ರತಿನಿಧಿಗಳಾದ ಜಯರಾಮ್ ಭಂಡಾರಿ ಎಂ., ಜಗನ್ನಾಥ ಹೆಚ್. ಗಂಗಾಧರ ಮಾಸ್ಟರ್ ಮೊದಲದವರು ಉಪಸ್ಥಿತರಿದ್ದರು.









