








ಪದ್ಮುಂಜ: ನುಸುರತ್ತುಸ್ಸಿಭಿಯಾನ್ ಮದರಸದಲ್ಲಿ ಕುಪ್ಪೆಟ್ಟಿ ಸುನ್ನೀ ಜಂಯೀಯತುಲ್ ಮುಅಲ್ಲಿಮೀನ್ ಇದರ ರೇಂಜ್ ವ್ಯಾಪ್ತಿಯ ಸಭೆಯು ಜ. 13ರಂದು ಪೂರ್ವಾಹ್ನ 6. 30ಕ್ಕೆ ಸರಿಯಾಗಿ ಸಮಿತಿ ಅಧ್ಯಕ್ಷ ಉಮರುಲ್ ಫಾರೂಕ್ ಸಖಾಫಿ ನೆಕ್ಕಿಲು ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಪ್ರಾಯೋಗಿಕವಾಗಿ ಐದನೇ ತರಗತಿಯ ಪಾಠವನ್ನು ಉರುವಾಲು ಪದವು ಮದರಸದ ಅಧ್ಯಾಪಕ ಖಳೀಲ್ ಸಅದಿಯವರು ನಡೆಸಿಕೊಟ್ಟರು. ಮುರ ಇಶ್ಹಾಖ್ ಹಾಸಿಮಿ ಖುರ್ಆನ್ ಪಠಣ ನಡೆಸಿದರು. ಪದ್ಮುಂಜ ಮಸೀದಿಯ ಮುಖ್ಯ ಗುರುಗಳಾದ ಹುಸೈನ್ ಸಅದಿ ಸುಲ್ತಾನಿ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಮಿತಿ ಕಾರ್ಯದರ್ಶಿ ಉರುವಾಲು ಪದವು ಅಧ್ಯಾಪಕ ಮುಹಮ್ಮದ್ ಸಅದಿ ಯವರು ವರದಿ ಮಂಡಿಸಿದರು. ಸಮಿತಿ ಕೋಶಾಧಿಕಾರಿ ಕುಪ್ಪೆಟ್ಟಿ ಅಧ್ಯಾಪಕ ಮುಸ್ತಫಾ ಸಅದಿ ಅವರು ಲೆಕ್ಕ ಪತ್ರ ಮಂಡಿಸಿದರು. ಸಭೆಯಲ್ಲಿ ಜಮಾಅತ್ ಅಧ್ಯಕ್ಷ ರಫೀಕ್ ಅಂತರ ಕಾರ್ಯದರ್ಶಿ ಕಾಸಿಂ ಪದ್ಮುಂಜ, ಆಳಕ್ಕೆ ಮದರಸದ ಅಧ್ಯಾಪಕ ಅಬ್ದುಸ್ಸಲಾಂ ಅಮ್ಜದಿ, ಪದ್ಮುಂಜ ಮದರಸದ ಅಧ್ಯಾಪಕ ಮುಹಮ್ಮದ್ ಸಫ್ವಾನ್ ಉಪಸ್ಥಿತರಿದ್ದರು.


ಅಧ್ಯಕ್ಷ ಭಾಷಣ ಮಾಡಿದ ಉಮರುಲ್ ಫಾರೂಕ್ ಸಖಾಫಿ ಅವರು ಮದರಸದ ವಿದ್ಯಾರ್ಥಿಗಳನ್ನು ಕೇವಲ ಹೆಚ್ಚು ಹೆಚ್ಚು ಅಂಕ ಪಡೆಯುವಂತೆ ಮಾಡುವುದು ಮಾತ್ರ ನಮ್ಮ ಸಾಧನೆಯಲ್ಲ. ಉತ್ತಮ ಸಂಸ್ಕ್ರತಿ, ದೇಶ, ಪ್ರೇಮ, ಆಚಾರ ವಿಚಾರ, ನಡೆ ನುಡಿಗಳನ್ನು ಜೀವನ ಪರ್ಯಂತ ಅಳವಡಿಸುವಂತೆ ಪ್ರೇರಣೆ ನೀಡುವುದು ನಮ್ಮ ಮುಖ್ಯ ಜವಾಬ್ದಾರಿಯಾಗಿದೆ ಎಂದರು.

ಹಿಂದೆ ನಡೆದ ಅಧ್ಯಾಪಕರ ತರಬೇತಿ ವರದಿಯನ್ನು ಕುಪ್ಪೆಟ್ಟಿ ಅಲ್ಫಾಸ್ ಸಅದಿಯವರು ಸಭೆಯಲ್ಲಿ ಮಂಡಿಸಿದರು. ನೆಕ್ಕಿಲು ಮದರಸದ ಅಧ್ಯಾಪಕ ಶಂಸುದ್ದೀನ್ ಹಿಮಮಿ ಅವರು ಇಶ್ರಾಹ್ ಮೆಹ್ರಾಜ್ ನಮಾಝಿನ ಬಗ್ಗೆ ಪ್ರಬಂಧ ಮಂಡಿಸಿದರು. ಕುಪ್ಪೆಟ್ಟಿ ಅಧ್ಯಾಪಕ ಅಬ್ಬಾಸ್ ಸಖಾಫಿ, ಉರುವಾಲು ಅಧ್ಯಾಪಕ ಫಾರೂಕ್ ಸಅದಿ ಪ್ರಾಯೋಗಿಕ ತರಗತಿಯ ಅವಲೋಕನ ನಡೆಸಿದರು.
ಬಟ್ಲಡ್ಕ ಹಾರಿಸ್ ಮದನಿ ಅವರು ಪ್ರಸಕ್ತ ವಿದ್ಯಮಾನಗಳ ವಾರ್ತೆಯನ್ನು ಸಭೆಯ ಮುಂದೆ ಓದಿ ಹೇಳಿದರು. ಅಳಕೆ ಮದರಸದ ಅಧ್ಯಾಪಕರಾದ ಅಬ್ದುಸ್ಸಲಾಂ ಅಮ್ಜದಿಯವರು. ಖಿತಾಬ್ ಪರಿಚಯ ನಡೆಸಿಕೊಟ್ಟರು. ನೆಕ್ಕಿಲು ಮದರಸದ ಅಧ್ಯಾಪಕರಾದ ಮುಹಮ್ಮದ್ ಸಅದಿಯವರು ಕ್ವಿಝ್ ನಡೆಸಿಕೊಟ್ಟರು. ಜಹಫರ್ ಸಅದಿ ನ್ಯೂ ಕುದ್ರೆಡ್ಕ ಅವರು ಮದರಸ ಅಧ್ಯಾಪಕರ ಪಿಂಚಣಿ ನೀಡುವುದರ ಬಗ್ಗೆ ವರದಿ ಮಂಡಿಸಿದರು. ಕಾರ್ಯದರ್ಶಿ ಮುಹಮ್ಮದ್ ಸಅದಿಯವರು ಸ್ವಾಗತಿಸಿ ಧನ್ಯವಾದ ಸಲ್ಲಿಸಿದರು.
ವರದಿ ಕಾಸಿಂ ಪದ್ಮುಂಜ.









