ಮಚ್ಚಿನ: ಪಾರೆಂಕಿ ಗ್ರಾಮದ ಮಾರಿಗುಡಿ ಶ್ರೀ ಮಾರಿಕಾಂಬ ದೇವಿಯ ಸನ್ನಿಧಿಯಲ್ಲಿ ನೇಮೋತ್ಸವ

0

ಮಚ್ಚಿನ: ಪಾರೆಂಕಿ ಗ್ರಾಮದ ಮಾರಿಗುಡಿ ಶ್ರೀ ಮಾರಿಕಾಂಬ ದೇವಿಯ ಸನ್ನಿಧಿಯಲ್ಲಿ ದಶಮಾನೋತ್ತರ ಅಷ್ಟಮ ಪ್ರತಿಷ್ಠಾ ವರ್ಧಂತ್ಯುತ್ಸವ ಹಾಗೂ ವಾರ್ಷಿಕ ದೊಂಪದ ಬಲಿ ನೇಮೋತ್ಸವ ನಡೆಯಿತು. ಬೆಳಿಗ್ಗೆ ಬ್ರಹ್ಮಶ್ರೀ ಡಾ. ಶಿವಪ್ರಸಾದ್ ತಂತ್ರಿಗಳು ಹಾಗೂ ಶ್ರೀ ಕ್ಷೇತ್ರ ಪಾರೆಂಕಿ ದೇವಾಲಯದ ಪ್ರಧಾನ ಅರ್ಚಕ ಟಿ.ವಿ. ಶ್ರೀಧರ ರಾವ್ ಅವರ ಪುರೋಹಿತದೊಂದಿಗೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ತೋರಣ ಮುಹೂರ್ತ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಗದ್ದಿಗೆ ಪೂಜೆ, ಮಹಾಪೂಜೆ, ದರ್ಶನ ಸೇವೆ, ದೈವ ದೇವರ ಭೇಟಿ, ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಿತು.

ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಗಾನ ಸಿರಿ ಕಲಕೇಂದ್ರ ಪುತ್ತೂರು ಅವರಿಂದ ಭಕ್ತಿ ಜಾನಪದ ಗೀತೆ ಸಂಗಮ ನಡೆಯಿತು. ಆಡಳಿತ ಮೊಕ್ತೇಸರ ಕೆ.ಅರವಿಂದ ಪಡಿವಾಳ್., ಕೆ. ರತ್ನರಾಜ ಪಡಿವಾಳ್ ಮೂಡಾಯೂರುಗುತ್ತು, ಗೌರವಾಧ್ಯಕ್ಷ ವಿಠಲ್ ಶೆಟ್ಟಿ ಮೂಡಾಯೂರು, ಅಧ್ಯಕ್ಷ ಬಾಲಚಂದ್ರ ಹೆಗ್ಡೆ, ಕೋಶಾಧಿಕಾರಿ ಡಾ. ಕೆ.ಎಸ್. ಬಲ್ಲಾಳ್, ಉಪಾಧ್ಯಕ್ಷರಾದ ಜಯಂತಿ ಹಾರಬೆ, ಕಿಶೋರ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಕಾಂತಪ್ಪ ಗೌಡ ಹಾಗೂ ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.
✍️ವರದಿ ಹರ್ಷ ಬಳ್ಳಮಂಜ

LEAVE A REPLY

Please enter your comment!
Please enter your name here