ಶಿಶಿಲ: ಕಾಡಂಚಿನ ಜನವಸತಿ ಪ್ರದೇಶದ ಬಳಿ ಅಡ್ಡಾಡುತ್ತಿರುವ ಆನೆ-ಗಾಯಗೊಂಡು ನಡೆದಾಡಲು ಕಷ್ಟಪಡುತ್ತಿರುವ ಶಂಕೆ

0

ಶಿಶಿಲ: ಕಳೆದ ತಿಂಗಳಿನಲ್ಲಿ ಆನೆ ಧಾಳಿ ಮಾಡಿದ ತೋಟದೊಳಗೆ ರಕ್ತ ಹಾಗೂ ಹುಳಗಳು ಕಂಡು ಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆನೆಗೆ ಗಾಯವಾಗಿರಬೇಕು ಎಂಬ ಶಂಕೆ ವ್ಯಕ್ತಪಡಿಸಿ ಅದನ್ನು ಹಾಗೂ ಜನರನ್ನು ರಕ್ಷಿಸುವಂತೆ ಜನಸ್ಪಂದನಾ ಸಭೆಯಲ್ಲಿ ಮನವಿ ಮಾಡಿದ್ದರು.

ಇದೀಗ ಜ.10ರ ರಾತ್ರಿ ಆನೆಯೊಂದು ಕಾಡಂಚಿನ ಜನವಸತಿ ಪ್ರದೇಶಗಳ ಬಳಿ ಅಡ್ಡಾಡಿದ್ದು ನಡೆದಾಡಲಾಗದೆ ಕಾಲನ್ನು ಎಳೆದುಕೊಂಡು ಹೋಗಿರುವ ಸ್ಪಷ್ಟ ಕುರುಹುಗಳು ಹಾಗೂ ಸಾಕಷ್ಟು ರಕ್ತದ ಕಲೆಗಳು ಕಂಡು ಬಂದಿದೆ.

ಜನ ವಸತಿಯ ಸುಮಾರು ಒಂದು ಕಿ.ಮೀ.ದೂರದಲ್ಲಿ ಆನೆಯ ಆಕ್ರಂದನ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಭೀತರಾಗಿದ್ದು ಆನೆಯನ್ನು ರಕ್ಷಿಸುವಂತೆ ತಮಗೆ ಸುರಕ್ಷೆಯನ್ನೊದಗಿಸುವಂತೆ ಇಲಾಖಾಧಿಕಾರಿಗಳನ್ನು ವಿನಂತಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here