






ಇಂದಬೆಟ್ಟು: ಬಂಗಾಡಿ ಪಿಚಾಲಾರ್ ಹತ್ತಿರ ಅಕೇಶೀಯಾ ಪ್ಲಾಂಟೇಷನ್ ಗೆ ವಿದ್ಯುತ್ ಅವಘಡದಿಂದ ಬೆಂಕಿ ಬಿದ್ದ ಘಟನೆ ನಡೆದಿದೆ. ಹತ್ತಿರದಲ್ಲೆ ಹಲವಾರು ಮನೆಗಳಿರುವುದರಿಂದ ಜನರು ಬಂದು ಬೆಂಕಿ ನಂದಿಸಿರುವುದರಿಂದ ಹೆಚ್ಚಿನ ಹಾನಿಯಾಗುವುದು ತಪ್ಪಿದೆ.



ಇಲ್ಲಿರುವ HT (JOC )ವಿದ್ಯುತ್ ಲೈನ್ ಹಲವು ಸಮಯಗಳಿಂದ ಶಬ್ದದೊಂದಿಗೆ ಬೆಂಕಿ ಉಂಟಾಗಿ ಕೆಳಗೆ ಬೀಳುತ್ತಿರುತ್ತವೆ. ಬುಡದಲ್ಲಿ ಹುಲ್ಲು ಗಿಡಗಳು ಬೆಳೆದು ಒಣಗಿ ಹೋಗಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.









