






ತಣ್ಣೀರುಪಂತ: ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲಾ ಶತಮಾನೋತ್ಸವದ ಕುರಿತು ಸಭೆ ಡಿ. 22ರಂದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯಾ ಯೋಜನೆಯಡಿಯಲ್ಲಿ ನಿರ್ಮಾಣವಾದ ಸುಮಾರು ಐದು ಲಕ್ಷದ ಇಪ್ಪತ್ತು ಸಾವಿರ ಅಂದಾಜು ವೆಚ್ಚದ ಶೌಚಾಲಯದ ಉದ್ಘಾಟನೆ ಹಾಗೂ ಹೆಚ್ಚುವರಿ ಶಿಕ್ಷಕರಾಗಿ ವರ್ಗಾವಣೆಗೊಂಡ ಶಿಕ್ಷಕ ಪ್ರೇಮನಾಥ ಅವರಿಗೆ ಬೀಳ್ಕೊಡುಗೆ ಸನ್ಮಾನ ಕಾರ್ಯಕ್ರಮ ನಡೆಯಿತು.


ಸಭಾ ಕಾರ್ಯಕ್ರಮದಲ್ಲಿ ತಣ್ಣೀರುಪಂತ ಗ್ರಾಮ ಪಂಚಾಯಿತಿ ಅಧ್ಯಕ್ಷೆ, ಶೌಚಾಲಯದ ಉದ್ಘಾಟಕರು ಹೇಮಾವತಿ ಹಾಗೂ ಪಂಚಾಯತ್ ನ ಸದಸ್ಯರಾದ ಸದಾನಂದ ಶೆಟ್ಟಿ ಮಡಿಪಾಡಿ, ನಿಶಾದ್ ಕುದ್ರಡ್ಕ, ಬಾರ್ಯ ಪುತ್ತಿಲ ಪಂಚಾಯತ್ ನ ಸದಸ್ಯ ಕಮಲಾಕ್ಷ ಕರ್ಪಾಡಿ, ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಅಬ್ದುಲ್ ಶರೀಫ್, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಭಾಕರ ವಸಂತೋಡಿ ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ವಜ್ರ ಕುಮಾರ್ ಅಂತರ ಹಾಗೂ ದಿವ್ಯ ಆಶಾ ಕಾರ್ಯಕರ್ತೆ, ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು, ಅಡುಗೆ ಸಿಬ್ಬಂದಿಗಳು ಭಾಗವಹಿಸಿದರು. ಡೈರೆಕ್ಟರ್









