






ವೇಣೂರು: ಸರಕಾರಿ ಪ್ರೌಢ ಶಾಲೆಗೆ ಯುವ ಬೆಂಗಳೂರು ಟ್ರಸ್ಟ್ನಿಂದ ದೇಣಿಗೆಯಾಗಿ ನೀಡಲಾದ ಸುಮಾರು ರೂ. 3 ಲಕ್ಷ ಮೌಲ್ಯದ ಇಂಟರಾಕ್ಟಿವ್ ಸ್ಮಾರ್ಟ್ಬೋರ್ಡ್ ಇದರ ಉದ್ಘಾಟನಾ ಕಾರ್ಯಕ್ರಮ ಜ. 9ರಂದು ನೆರವೇರಿತು.


ಸಂಸ್ಥಾಪಕ ಮತ್ತು ಮ್ಯಾನೇಜಿಂಗ್ ಟ್ರಸ್ಟಿ ಕಿರಣ್ ಸಾಗರ್, ಟ್ರಸ್ಟಿ ಸುನಿಲ್ ಬಿ.ವಿ. ಉದ್ಘಾಟರಿಸಿದರು. SDMC ಕಾರ್ಯಾಧ್ಯಕ್ಷ ರಾಜೇಶ್ ಪೂಜಾರಿ ಮೂಡುಕೋಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಶಾಲೆಯ ಉಪ ಪ್ರಾಂಶುಪಾಲ ವೆಂಕಟೇಶ ತುಳುಪುಳೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕನ್ನಡ ಶಿಕ್ಷಕ ರವೀಂದ್ರ ಕೆ. ಸ್ವಾಗತಿಸಿ, ಕಾರ್ಯಕ್ರಮದ ನಿರೂಪಣೆಯನ್ನು ಸಮಾಜ ವಿಜ್ಞಾನ ಶಿಕ್ಷಕಿ ಸುಶೀಲ ಜಿ. ನೆರವೇರಿಸಿದರು. ಉಪಪ್ರಾಂಶುಪಾಲರು ಧನ್ಯವಾದ ನೆರವೇರಿಸಿದರು.









