ಕಲ್ಮಂಜ: ಸಂಚರಿಸುತ್ತಿರುವಾಗಲೇ ಕಳಚಿ ಬಿದ್ದ ಬಸ್ ಟಯ‌ರ್

0

ಕಲ್ಮಂಜ: ಮಂಗಳೂರು-ವಿಲ್ಲಪುರಂ ರಾಷ್ಟ್ರೀಯ ಹೆದ್ದಾರಿಯ ಕಲ್ಮಂಜ ಸರಕಾರಿ ಪ್ರಾಥಮಿಕ ಶಾಲಾ ಬಳಿ ಸರಕಾರಿ ಬಸ್‌ ಸಂಚಾರದಲ್ಲಿರುವಾಗಲೇ ಟಯ‌ರ್ ಕಳಚಿ ಬಿದ್ದ ಘಟನೆ ಜ.8ರಂದು ಸಂಜೆ ನಡೆದಿದೆ.

ದಾವಣಗೆರೆ- ಮಂಗಳೂರು ಕಡೆ ಸಂಚರಿಸುತ್ತಿದ್ದ ಕೆ.ಎಸ್.ಆ‌ರ್.ಟಿ.ಸಿ. ಬಸ್‌ನ ವೀಲ್ ಹಬ್ ತುಂಡರಿಸಿದ ಪರಿಣಾಮವಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಬಸ್ ನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದು, ಬದಲಿ ಬಸ್‌ ಮೂಲಕ ಪ್ರಯಾಣಿಕರನ್ನು ಕಳುಹಿಸಲಾಗಿದೆ.

LEAVE A REPLY

Please enter your comment!
Please enter your name here