






ಬೆಳ್ತಂಗಡಿ: ತುಮಕೂರಿನ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಬೆಳ್ತಂಗಡಿ ಶಾಖೆಯಲ್ಲಿ ವೈಕುಂಠ ಏಕಾದಶಿಯ ದಿನ ವಿಷ್ಣು ನಮಸ್ಕಾರ ಭಜನೆಯು ಸಂತೋಷ್ ಅವರ ಮುಂದಾಳತ್ವದಲ್ಲಿ ಡಿ.31ರಂದು ಎಸ್.ಡಿ.ಎಂ ಕಲಾಭವನದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಮುಖ್ಯ ಶಿಕ್ಷಕಿ ಪ್ರೇಮಲತಾ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಭಜನೆಯನ್ನು ರಘುನಾಥ ಮತ್ತು ಸುಜಾತ ಅವರು ನಡೆಸಿಕೊಟ್ಟರು. ನಂತರ ಯೋಗ ಬಂಧುಗಳಿಂದ ವಿಷ್ಣು ನಮಸ್ಕಾರ ಮತ್ತು ವಿಷ್ಣು ಪೂಜೆ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಪ್ರೇಮಲತಾ ಮತ್ತು ಕೋಮಲ ಭಾಗವಹಿಸಿದ್ದರು. ಸುಮಾರು 50 ಮಂದಿ ಯೋಗ ಬಂಧುಗಳು ಭಾಗವಹಿಸಿದ್ದರು. ವಸಂತ ಹೇಬೆ ಅವರು ಧನ್ಯವಾದ ನೀಡಿದರು.









