






ಶಿಬಾಜೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಬೆಳ್ತಂಗಡಿ ತಾಲೂಕು ಅರಸಿನಮಕ್ಕಿ ವಲಯದ ಪೆರ್ಲ ಕಾರ್ಯಕ್ಷೇತ್ರದಲ್ಲಿ ಧರಣಿ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನಾ ಸಮಾರಂಭ ಪೆರ್ಲ ರಾಜೀವ ಗಾಂಧಿ ಸಭಾಭವನದಲ್ಲಿ ನಡೆಯಿತು.
ಉದ್ಘಾಟಕ ವಿಠಲ ಪೂಜಾರಿ ಮಾತನಾಡಿ ಹಿಂದಿನ ಕಾಲದಲ್ಲಿ ಯಾವ ರೀತಿ ಬಡತನ ಇತ್ತು, ಸಂಸ್ಕಾರ ಸಂಪ್ರದಾಯ ಆಚಾರ ವಿಚಾರಗಲಿತ್ತು ಈಗ ಅದೆಲ್ಲವೂ ಮರೆ ಮಾಚಿದೆ. ಮುಂದಿನ ದಿನಗಳ ಬಗ್ಗೆ ನಮಗೆಲ್ಲ ಭಯವಿದೆ. ಹಿಂದಿನ ಕಾಲದ ಸಂಸ್ಕಾರಗಳನ್ನು ಉಳಿಸಬೇಕಾದರೆ ನಮಗೆ ತಿಳಿದದ್ದನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾಗಿದೆ. ಜ್ಞಾನ ವಿಕಾಸ ಕೇಂದ್ರದ ಮೂಲಕ ಜೀವನಕ್ಕೆ ಪೂರಕವಾದ ಹಲವಾರು ಮಾಹಿತಿಗಳನ್ನು ಪಡೆದು ಕುಟುಂಬಕ್ಕೆ ಬೆಳಕಾಗಲಿ ಎಂದು ತಿಳಿಸಿದರು.
ವಾತ್ಸಲ್ಯ ಕಾರ್ಯಕ್ರಮದ ಮೂಲಕ 20,000 ಕುಟುಂಬಗಳು ನೆಮ್ಮದಿಯ ಬದುಕು ಕಂಡುಕೊಂಡಿದೆ. ತನ್ನ ತಂದೆ ತಾಯಿಯನ್ನೇ ಆಶ್ರಮದಲ್ಲಿ ಬಿಡುವ ಈ ಕಾಲದಲ್ಲಿ ಶ್ರೀ ಕ್ಷೇತ್ರದಿಂದ ವಾತ್ಸಲ್ಯ ಮನೆ ನಿರ್ಮಾಣ ಮಾಡಿಕೊಡುವ ಮೂಲಕ ಬದುಕನ್ನು ಕಟ್ಟಿಕೊಟ್ಟಿದೆ ಎಂದರು.


ಸಿ ಎ ಬ್ಯಾಂಕ್ ಮಾಜಿ ಕಾರ್ಯನಿರ್ವಹಣಾಧಿಕಾರಿ ತ್ಯಾಂಪಣ್ಣ ಶೆಟ್ಟಿಗಾರ್ ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಮ್ಮೆಲ್ಲರನ್ನು ಅಬಿವೃದ್ದಿಪಡಿಸಿ ಇವತ್ತು ಉತ್ತಮ ರೀತಿಯಲ್ಲಿ ಬದುಕು ಕಂಡುಕೊಂಡಿದ್ದೇವೆ.
ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಇನ್ನಷ್ಟು ಮಾಹಿತಿಯನ್ನು ನಮಗೆ ತಿಳಿದಿದ್ದನ್ನು ಕನಿಷ್ಠ ನಮ್ಮ ಮನೆಯವರಿಗೆ ತಿಳಿಸಿದಾಗ ಎಲ್ಲರೂ ಪ್ರಬುದ್ಧತೆ ಹೊಂದಲು ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಒಕ್ಕೂಟ ಮಾಜಿ ಅಧ್ಯಕ್ಷೆ ವನಿತಾರವರು ಒಕ್ಕೂಟದಲ್ಲಿ ಹೊಸ ಜ್ಞಾನ ವಿಕಾಸ ಕೇಂದ್ರಕ್ಕೆ ಅವಕಾಶ ದೊರೆತಿದೆ ಉತ್ತಮ ರೀತಿಯಲ್ಲಿ ಮುಂದುವರಿಸುವಂತೆ ಕರೆ ನೀಡಿದರು.
ಕಾರ್ಯಕ್ರಮಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಾ, ಒಕ್ಕೂಟ ಅಧ್ಯಕ್ಷ ಅಣ್ಣು ಗೌಡ, ಭಜನಾ ಮಂಡಳಿಯ ಅಧ್ಯಕ್ಷ ವಿನಯ ಚಂದ್ರ ಉಪಸ್ಥಿತರಿದ್ದರು. ಸೇವಾಪ್ರತಿನಿಧಿ ಅರುಣಾ ಸ್ವಾಗತಿಸಿ, ಜ್ಞಾನ ವಿಕಾಸ ಸಮನ್ವಯಧಿಕಾರಿ ಮಧುರಾವಸಂತ್ ಕಾರ್ಯಕ್ರಮ ನಿರೂಪಿಸಿದರು. ಮೇಲ್ವಿಚಾರಕಿ ಶಶಿಕಲಾ ಧನ್ಯವಾದವಿತ್ತರು.









