ಪದ್ಮುಂಜ: ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜನ ಆರೋಗ್ಯ ರಕ್ಷಾ ಸಭೆ

0

ಪದ್ಮುಂಜ: ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜನ ಆರೋಗ್ಯ ರಕ್ಷಾ ಸಮಿತಿ ಸಭೆ ಜ. 5ರಂದು ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರ ಪದ್ಮುಂಜದಲ್ಲಿ ನಡೆಸಲಾಯಿತು. ವೈದ್ಯಾಧಿಕಾರಿ ನಿತಿನ್ ರವರು ಸಭೆಯ ಉದ್ದೇಶವನ್ನು ವಿವರಿಸಿದರು. ಹಿರಿಯ ಆರೋಗ್ಯ ಸಹಾಯಕಿ ಸುನಿತಾರವರು ಆಸ್ಪತ್ರೆಗೆ ಅಗತ್ಯ ಬೇಕಾದ ಮೂಲಭೂತ ಸೌಕರ್ಯದ ಬೇಡಿಕೆಗಳನ್ನು ಸಭೆಯ ಮುಂದೆ ಮಂಡಿಸಿದರು.
ಅಗತ್ಯ ಬೇಡಿಕೆಗಳನ್ನು ಈಡೇರಿಸಿಕೊಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುವುದೆಂದು ತೀರ್ಮಾನಿಸಲಾಯಿತು. ತಣ್ಣೀರುಪಂತ ಗ್ರಾಮ ಪಂಚಾಯತಿ ಅಧ್ಯಕ್ಷೆ ಹೇಮಲತಾ, ಕಾ‌ಸಿಂ ಪದ್ಮುಂಜ ಸೇರಿದಂತೆ ಸಮಿತಿ ಸದಸ್ಯರು ಆರೋಗ್ಯ ಸಹಾಯಕಿಯರು ಉಪಸ್ಥಿತರಿದ್ದರು. ಆರೋಗ್ಯ ಸಹಾಯಕ ಜಗದೀಶ್ ರವರು ಸ್ವಾಗತಿಸಿ, ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here