ಪ್ರೋ. ಎ. ಕೃಷ್ಣಪ್ಪ ಪೂಜಾರಿ ಅವರಿಗೆ ಪೇಜಾವರ ವಿಶ್ವೇಶತೀರ್ಥ “ಜೀವಮಾನ ಸಾಧನಾ ಪ್ರಶಸ್ತಿ”

0

ಬೆಳ್ತಂಗಡಿ: ಡಿ. 29ರಂದು ಕದ್ರಿ ವಿಶ್ವೇಶತೀರ್ಥ ವೇದಿಕೆಯಲ್ಲಿ ಜರುಗಿದ ಪೇಜಾವರ ವಿಶ್ವೇಶತೀರ್ಥ ನಮನ -2025 ಕಾರ್ಯಕ್ರಮದಲ್ಲಿ ಕಲ್ಕೂರ ಪ್ರತಿಷ್ಠಾನ ಮಂಗಳೂರು ಅವರ ವತಿಯಿಂದ ಪ್ರೋ| ಎ. ಕೃಷ್ಣಪ್ಪ ಪೂಜಾರಿಯವರಿಗೆ ಪೇಜಾವರ ವಿಶ್ವೇಶತೀರ್ಥ “ಜೀವಮಾನ ಸಾಧನಾ ಪ್ರಶಸ್ತಿ” ಯನ್ನು ಪ್ರದಾನ ಮಾಡಲಾಯಿತು.

ಫಲಿಮಾರು ಮಠದ ವಿದ್ಯಾಧೀಶ ತೀರ್ಥ ಶ್ರೀಪಾದರು, ಎಡನೀರು ಮಠದ ಸಚ್ಚಿದಾನಂದ ಭಾರತಿ ಶ್ರೀಪಾದರು, ಮೂಡಬಿದ್ರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್‌ ಕುಮಾರ್ ಕಲ್ಕೂರ ಅವರು ಕಾರ್ಯಕ್ರಮದ ಸಂಯೋಜನೆ ಮಾಡಿ, ಅಭಿನಂದಿಸಿದರು.

LEAVE A REPLY

Please enter your comment!
Please enter your name here