








ಅರಸಿನಮಕ್ಕಿ: ಶೀರೂರು ವೇದ ವರ್ಧನ ಸ್ವಾಮೀಜಿಗಳು ಪರ್ಯಾಯ ಸಂಚಾರದಲ್ಲಿ ಬೆಳ್ತಂಗಡಿ ತಾಲೂಕಿನ ವಿವಿಧ ಕಡೆ ಪುಣ್ಯಕ್ಷೇತ್ರ ಸಂದರ್ಶನ ಮಾಡಲಿದ್ದಾರೆ. ಜ.2ರಂದು ಅರಸಿನಮಕ್ಕಿ ಶ್ರೀ ಬೂಡುಮುಗೇರು ದೇವಸ್ಥಾನಕ್ಕೆ ಆಗಮಿಸಲಿದ್ದು, ಬೆಳಿಗ್ಗೆ 8.30ಕ್ಕೆ ಪೂರ್ಣ ಕುಂಭಸ್ವಾಗತ, ಪಟ್ಟದ ದೇವರ ಪೂಜೆ, ಅಶೀರ್ವಚನ, ನಾಗರಿಕ ಸನ್ಮಾನ ನಡೆಯಲಿದೆ. ಶಿಶಿಲ, ಶಿಬಾಜೆ, ಹತ್ಯಡ್ಕ, ರೆಖ್ಯ ಗ್ರಾಮದ ಪರವಾಗಿ ಸ್ವಾಮೀಜಿಗಳಿಗೆ ಸನ್ಮಾನ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಅಭಿನಂದನೆ ನಾಗರಿಕ ಸನ್ಮಾನ ನಡೆಯಲಿದೆ. ಗ್ರಾಮಸ್ಥರು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಮಿತಿಯ ಪದಾಧಿಕಾರಿಗಳು ವಿನಂತಿಸಿದ್ದಾರೆ.









