ಬೆಳಾಲು: ಮಾಯ ಮಹೇಶ್ವರ ಭಜನಾ ಮಂಡಳಿ ಮಾಜಿ ಅಧ್ಯಕ್ಷ ಕುಂಭ ಗೌಡರಿಗೆ ಭಜನಾ ಮಂಡಳಿಯಿಂದ ನುಡಿನಮನ

0

ಬೆಳಾಲು: ಮಾಯ ಶ್ರೀ ಮಾಯ ಮಹೇಶ್ವರ ಭಜನಾ ಮಂಡಳಿಯ ಮಾಜಿ ಅಧ್ಯಕ್ಷ ಡಿ.25ರಂದು ನಿಧನರಾದ ಕುಂಭ ಗೌಡ ಬರಮೇಲು ಅವರಿಗೆ ಭಜನಾ ಮಂಡಳಿಯಿಂದ ಡಿ. 29ರಂದು ದೇವಸ್ಥಾನದಲ್ಲಿ ನುಡಿನಮನ ಕಾರ್ಯಕ್ರಮ ನಡೆಯಿತು.

ಬೆಳಾಲು ನವಜೀವನ ಸಮಿತಿ ಅಧ್ಯಕ್ಷ ಬಿರ್ಮಣ ಪೂಜಾರಿ ದೀಪ ಬೆಳಗಿಸಿದರು. ನಿವೃತ್ತ ಪೊಲೀಸ್ ದೇವಪ್ಪ ಎಂ., ಭಜನಾ ಮಂಡಳಿಯ ಮಾಜಿ ಕಾರ್ಯದರ್ಶಿ ಸುದ್ದಿ ಬಿಡುಗಡೆ ಪತ್ರಿಕೆಯ ಹಿರಿಯ ವರದಿಗಾರ ಜಾರಪ್ಪ ಪೂಜಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಯ ಒಕ್ಕೂಟದ ಅಧ್ಯಕ್ಷ, ಭಜನಾ ಮಂಡಳಿಯ ಮಾಜಿ ಅಧ್ಯಕ್ಷ ಗಂಗಾಧರ ಸಾಲಿಯಾನ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಭಜನಾ ಮಂಡಳಿಯ ಮಾಜಿ ಕಾರ್ಯದರ್ಶಿ ದಯಾನಂದ ಪಿ. ಬೆಳಾಲು, ಮಾಜಿ ಕಾರ್ಯದರ್ಶಿ ವಿಶ್ವನಾಥ ಪೂಜಾರಿ ಪೆಲತ್ತಡಿ ಅವರು ನುಡಿ ನಮನ ಸಲ್ಲಿಸಿ ಭಜನಾ ಮಂಡಳಿ, ದೇವಸ್ಥಾನ, ಜನಜಾಗೃತಿ ವೇದಿಕೆ, ಒಕ್ಕೂಟ, ನವಜೀವನ ಸಮಿತಿಯಲ್ಲಿ ಅವರು ಮಾಡಿದ ಸೇವೆಯನ್ನು ಸ್ಮರಿಸಿ ನುಡಿನಮನ ಸಲ್ಲಿಸಿದರು.

ದೈಹಿಕ ಶಿಕ್ಷಣ ಶಿಕ್ಷಕ ಧರ್ಮೇಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಭಜಜಾ ಮಂಡಳಿಯ ಅಧ್ಯಕ್ಷ ಹರೀಶ್ ಆಚಾರ್ಯ, ಕಾರ್ಯದರ್ಶಿ ಶಿವಪ್ರಸಾದ್, ಉಪಾಧ್ಯಕ್ಷ ಶಶಿಧರ ಕೆ., ಗೌರವಾಧ್ಯಕ್ಷ ಕೃಷ್ಣಪ್ಪ ಗೌಡ, ಮಾಜಿ ಅಧ್ಯಕ್ಷರಾದ ಪೆರಣ ಗೌಡ, ಮೋಹನ ಪೂಜಾರಿ, ವಸಂತ ಎಂ. ಎಂಗಾಜೆ, ಕುಂಭ ಗೌಡರ ಪುತ್ರ ರಾಮಚಂದ್ರ, ಭಜನಾ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಊರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here