






ಬೆಳ್ತಂಗಡಿ: ಬುರುಡೆ ಷಡ್ಯಂತ್ರ ಪ್ರಕರಣ ಸಂಬಂಧ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ಸಹೋದರ ಮೋಹನ್ ಶೆಟ್ಟಿ ಲ್ಯಾಪ್ ಟಾಪ್, ಪೆನ್ ಡ್ರೈವ್ ಇನ್ನಿತರ ಎಲೆಕ್ಟ್ರಾನಿಕ್ಸ್ ಪರಿಕರ ಹಾಗೂ ಗಿರೀಶ್ ಮಟ್ಟಣ್ಣನವರ್ ನ ಐಫೋನ್ ಮೊಬೈಲ್ ಎಸ್‌ಐಟಿ ಸ್ವಾಧೀನಪಡಿಸಿಕೊಂಡಿತ್ತು.


ಇಬ್ಬರ ಮೊಬೈಲ್, ಲ್ಯಾಪ್ ಟಾಪ್ ಬಿಡುಗಡೆ ಮಾಡಿಸಲು ಬೆಳ್ತಂಗಡಿ ನ್ಯಾಯಾಲಯಕ್ಕೆ ವಕೀಲರ ಮೂಲಕ ಅರ್ಜಿಯನ್ನು ಸಲ್ಲಿಸಿದ್ದರು.ಈ ಅರ್ಜಿಯ ಬಗ್ಗೆ ಹೆಚ್ಚುವರಿ ನ್ಯಾಯಾಲಯದಲ್ಲಿ ಡಿ.26 ರಂದು ತಕರಾರು ಸಲ್ಲಿಸಿದ್ದ ಎಸ್. ಐ. ಟಿ ಪರ ವಕೀಲ ದಿವ್ಯರಾಜ್ ಹೆಗ್ಡೆ ವಿಸ್ತೃತ ವಾದ ಮಂಡಿಸಿದ್ದರು. ಈ ಅರ್ಜಿಯ ಆದೇಶವನ್ನು ಡಿ.29ಕ್ಕೆ ಮುಂದೂಡಿದ್ದರು. ಇದೀಗ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಬಿಡುಗಡೆ ಅರ್ಜಿಯನ್ನು ವಜಾ ಮಾಡಿ ಬೆಳ್ತಂಗಡಿ ಹೆಚ್ಚುವರಿ ನ್ಯಾಯಾಲಯ ಆದೇಶ ಮಾಡಿದೆ.









