ಬೆಳಾಲು: ವ್ಯಕ್ತಿ ನಾಪತ್ತೆ- ಪ್ರಕರಣ ದಾಖಲು

0

ಬೆಳಾಲು: ಮನೆಯಿಂದ ಹೊರಟು ಹೋದ ವ್ಯಕ್ತಿ ಮನೆಗೆ ವಾಪಾಸು ಹಿಂದಿರುಗದೆ ಕಾಣೆಯಾದ ಘಟನೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಾಲು ಗ್ರಾಮದ ಪುರುಷರಬೆಟ್ಟು ಎಂಬಲ್ಲಿ ಡಿ.27ರಂದು ನಡೆದಿದೆ. ಕಾಣೆಯಾದ ವ್ಯಕ್ತಿ ಚಿನ್ನಪ್ಪ ಗೌಡರ ಹಿರಿಯ ಪುತ್ರ ರಾಜೇಶ್ ಪಿ. ಅವರು ಒಂದು ವರ್ಷದ ಹಿಂದೆ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಬಳಿಕ ವಾಪಾನು ಊರಿಗೆ ಬಂದು ಕೆಲಸವಿಲ್ಲದೆ ತಂದೆ-ತಾಯಿಯ ಜೊತೆಗೆ ಮನೆಯಲ್ಲಿ ವಾಸವಿದ್ದರು.

ಡಿ. 27ರಂದು ಅವರ ತಮ್ಮ ಪ್ರಶಾಂತ್ ಪಿ. ಅವರು ರಜೆಯ ಕಾರಣ ಮನೆಗೆ ಬಂದಾಗ ಅಣ್ಣ ರಾಜೇಶ್ ಕಾಣದಿರುವುದನ್ನು ತಾಯಿಯಲ್ಲಿ ವಿಚಾರಿಸಿದಾಗ ಅವನು ಬೆಳಿಗ್ಗೆ 10 ಗಂಟೆಗೆ ಮನೆಯಿಂದ ಹೊರಗೆ ಹೋದವನು ವಾಪಾಸು ಬಂದಿರುವುದಿಲ್ಲವಾಗಿ ತಿಳಿಸಿದರು. ಅವರ ಮೊಬೈಲ್‌ ಕರೆ ಮಾಡಿದರೆ ಕರೆಯನ್ನು ಸ್ವೀಕರಿಸುತ್ತಿರಲಿಲ್ಲ. ಅವರನ್ನು ಪತ್ತೆ ಹಚ್ಚಿಕೊಡಬೇಕು ಎಂದು ತಮ್ಮ ಪ್ರಶಾಂತ್ ಪಿ. ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ.

LEAVE A REPLY

Please enter your comment!
Please enter your name here