ಉಜಿರೆ: ಬಾಂಗ್ಲಾದೇಶದಲ್ಲಿ ನಡೆದ ಹಿಂದೂ ಯುವಕನ ಹತ್ಯೆ ಖಂಡಿಸಿ ವಿ.ಹಿಂ.ಪ. ಪ್ರತಿಭಟನೆ

0

ಉಜಿರೆ: ಬಾಂಗ್ಲಾದೇಶದಲ್ಲಿ ನಡೆದ ಹಿಂದು ಯುವಕನ ಸಜೀವ ದಹನವನ್ನು ಖಂಡಿಸಿ ಉಜಿರೆ ವೃತ್ತದ ಬಳಿ ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ‌ ಬೆಳ್ತಂಗಡಿ ಪ್ರಖಂಡದ ವತಿಯಿಂದ ಡಿ. 24 ರಂದು ಸಂಜೆ ಪ್ರತಿಭಟನೆ ನಡೆಯಿತು.

ಬಾಂಗ್ಲಾ ದೇಶದಲ್ಲಿ ನಡೆದ ದೀಪುಚಂದ್ರ ದಾಸ್ ಎಂಬವರ ಹತ್ಯೆ, ಸಜೀವ ದಹನ ಖಂಡಿಸಿ ಸಂಜೆ ಈ ಪ್ರತಿಭಟನೆ ನಡೆಸಲಾಯಿತು. ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಕಾರಂತ್, ವಿಷ್ಣು ಮರಾಠ, ಪೃಥ್ವಿಶ ಧರ್ಮಸ್ಥಳ, ನವೀನ್ ನೆರಿಯ, ದಿನೇಶ್ ಚಾರ್ಮಾಡಿ, ಸಂತೋಷ್ ಅತ್ತಾಜೆ, ನಾಗೇಶ್ ಕಲ್ಮಂಜ, ರಮೇಶ್ ಮುಂಡತ್ತೊಡಿ, ಉಜಿರೆ ಗ್ರಾಮ ಪಂಚಾಯತ್ ಸದಸ್ಯ ಗುರುರಾಜ್, ಮತ್ತಿತರರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here