






ಬೆಳ್ತಂಗಡಿ: ಧರ್ಮಪ್ರಾಂತ್ಯದ ಸಮಾಜ ಸೇವಾ ವಿಭಾಗವಾದ ಡಿ.ಕೆ.ಆರ್.ಡಿ.ಎಸ್ ನೇತೃತ್ವದಲ್ಲಿ ಮಾಧ್ಯಮ ಮಿತ್ರರೊಂದಿಗೆ ಕ್ರಿಸ್ ಮಸ್ ಸ್ನೇಹ ಕೂಟವು ಡಿ.23ರಂದು ಸಾಂತೋಮ್ ಟವರ್ ನಲ್ಲಿ ನಡೆಯಿತು.
ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕ ಫಾ. ಬಿನೋಯಿ ಎ.ಜೆ. ಅವರು ಪ್ರಾಸ್ತಾವಿಕ ಮಾತನಾಡಿ ಮಾಧ್ಯಮ ಮಿತ್ರರು ಸಂಸ್ಥೆಯ ಕಾರ್ಯಕ್ರಮಕ್ಕೆ, ಸಹಕಾರಕ್ಕೆ ಧನ್ಯವಾದ ತಿಳಿಸಿ, ಕ್ರಿಸ್ ಮಸ್ ಸಂದೇಶ ನೀಡಿದರು.


ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಏಣಿಂಜೆ ಮುಖ್ಯ ಅಭ್ಯಾಗತರಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಹಾಜರಿದ್ದ ಎಲ್ಲಾ ಪತ್ರಿಕೆ ಹಾಗೂ ಮೀಡಿಯಾ ಕ್ಲಬ್ ನ ಸದಸ್ಯರಿಗೆ ಕಿರು ಕಾಣಿಕೆ ನೀಡಲಾಯಿತು. ಸಂಯೋಜಕಿಶ್ರೇಯಾ ಹಾಗೂ ಜಿನಿ ಪಿ.ಜೆ. ಪ್ರಾರ್ಥನೆ ಹಾಡಿದರು. ಸಂಸ್ಥೆಯ ಸಂಯೋಜಕ ಸುನಿಲ್ ಗೊನ್ಸಾಲ್ವಿಸ್ ಎಲ್ಲರನ್ನು ಸ್ವಾಗತಿಸಿ, ಸಂಸ್ಥೆಯ ಕಾರ್ಯಕರ್ತ ಮಾರ್ಕ್ ಡಿ’ಸೋಜರವರು ಕಾರ್ಯಕ್ರಮ ನಿರೂಪಿಸಿದರು. ಶ್ರೇಯ ಧನ್ಯವಾದವಿತ್ತರು.









