






ಸುಲ್ಕೇರಿಮೊಗ್ರು: ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಇದರ ಆಶ್ರಯದಲ್ಲಿ 3ನೇ ವರ್ಷದ ಗುರು ಪೂಜೆ ಮತ್ತು ದೀಕ್ಷಾ ಗ್ರಂಥಿದಾರಣೆ ಹಾಗೂ ಸಭಾ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಡಿ. 21ರಂದು ಸುಲ್ಕೇರಿಮೊಗ್ರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ನಿರಂಜನ ಶಾಂತಿಯವರ ಪೌರೋಹಿತ್ಯದಲ್ಲಿ ಗುರು ಪೂಜೆ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆಯನ್ನು ಸುಲ್ಕೇರಿಮೊಗ್ರು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸಂಕೇತ್ ಬಂಗೇರ, ವಹಿಸಿದ್ದರು.
ಧಾರ್ಮಿಕ ಭಾಷಣ ಮಹೇಶ್ ಶಾಂತಿ ಹೆಜಮಾಡಿ ಅವರು ಮಾಡಿ ನಾರಾಯಣ ಗುರುಗಳ ಜೀವನ ಚರಿತ್ರೆಯನ್ನು ಸಂಕ್ಷಿಪ್ತವಾಗಿ ತಿಳಿಸಿದರು.



ಮುಲ್ಕಿ, ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳಿಗೆ ವಿಧ್ಯಾಬ್ಯಾಸದ ಜೊತೆ ಉತ್ತಮ ಸಂಸ್ಕಾರವನ್ನು ಕಲಿಸಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಜಿಲ್ಲಾ ಪ್ರಶಸ್ತಿ ಪಡೆದ ಸತೀಶ್ ದೇವಾಡಿಗ ಸುಲ್ಕೇರಿಮೊಗ್ರು, ಹಾಗೂ ಯುವ ಪ್ರತಿಭೆ ಹಾಗೂ ಬಡ ರೋಗಿಗಳಿಗೆ ತನ್ನ ವೀಡಿಯೋ ಮೂಲಕ ಸಹಾಯ ಮಾಡುತ್ತಿರುವ ಜಯಂತ್ ಮಡಿವಾಳ ಹಾಗೂ ಶಿರ್ಲಾಲು ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿ ಪತಿನ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷರಾಗಿ ಆಯ್ಕೆಯಾದ ಸುಧೀರ್ ಆರ್. ಸುವರ್ಣ, ನಿರ್ದೇಶಕರಾದ ಅಶೋಕ ಕಾಡಂಗೆ, ಅಶೋಕ ನಲ್ಲಾರು ಅವರನ್ನು ಸನ್ಮಾನಿಸಲಾಯಿತು.

ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ವೇದಿಕೆಯಲ್ಲಿ ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯ ವಿಕ್ರಮ ಕಲ್ಲಾಪು, ಪ್ರಗತಿಪರ ಕೃಷಿಕರಾದ ಎಂ. ಗಂಗಾಧರ ಮಿತ್ತಮಾರು, ಸೋಮನಾಥ ಬಂಗೇರ ವರ್ಪಾಳೆ, ಬೆಳ್ತಂಗಡಿ ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಎಂ. ಕೆ. ಪ್ರಸಾದ್, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಸುಮತಿ ಪ್ರಮೋದ್, ಶಿರ್ಲಾಲು ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಅಧ್ಯಕ್ಷರಾದ ಸುಧೀರ್ ಆರ್. ಸುವರ್ಣ, ಬೇಬಿ ಬಂಗೇರ ಹುಂಬೆದಡ್ಕ, ಗುರುವಪ್ಪ ಪೂಜಾರಿ ಪಟ್ಲ, ವಿಜಯಕುಮಾರ್, ನಂದನ್ ಕುಮಾರ್, ಸಚಿನ್ ಮಾಂತ್ಯೋಲು, ಶಕುಂತಳ, ಮಮತ ಎಸ್.ಎಂ. ಉಪಸ್ಥಿತರಿದ್ದರು.

ಲಾಸ್ಯ ಪ್ರಾರ್ಥನೆ ಮಾಡಿದರು. ಸಂಘದ ಕಾರ್ಯದರ್ಶಿ ವಿಜಯಕುಮಾರ್ ಸ್ವಾಗತಿಸಿ. ಸುಧಾಕರ ಪೂಜಾರಿ ಅಳಿಯೂರು ಕಾರ್ಯಕ್ರಮದ ನಿರೂಪಿಸಿದರು. ಯುವ ಬಿಲ್ಲವ ವೇದಿಕೆ ಅಧ್ಯಕ್ಷ ನಂದನ್ ಕುಮಾರ್ ಧನ್ಯವಾದವಿತ್ತರು.
ಚಿತ್ರ, ವರದಿ: ಜ್ಯೋತಿಕಾ ಅಳದಂಗಡಿ.









