






ಬೆಳ್ತಂಗಡಿ: ಸುದೀರ್ಘ 31 ವರ್ಷಗಳ ಕಾಲ ಸೇವೆ ಸಲ್ಲಿಸಿದ ಮಂಜುನಾಥ ಕುಮಾರ್ ಕೆ. ಅವರ ಗುರುವಂದನಾ ಕಾರ್ಯಕ್ರಮವು ಡಿ.20ರಂದು ಶಾಲಾ ಸಭಾಂಗಣದಲ್ಲಿ ಜರಗಿತು. ಶಾಲಾ ಸಂಚಾಲಕರು ಫಾ. ವಾಲ್ಟರ್ ಓಸ್ವಲ್ಡ್ ಡಿಮೆಲ್ಲೊ ಅಧ್ಯಕ್ಷತೆ ವಹಿಸಿ, ಸನ್ಮಾನಿಸಿ ಅವರ ಸೇವೆಯನ್ನು ಶ್ಲಾಘನೆ ಮಾಡಿದರು.


ಮುಖ್ಯ ಅತಿಥಿಯಾಗಿ ಎಸ್.ಡಿ.ಎಮ್ ಕಾಲೇಜಿನ ಸಹಪ್ರಾಧ್ಯಪಕ ಸಸ್ಯಶಾಸ್ತ್ರ ವಿಭಾಗದ ಅಭಿಲಾಶ್ ಕೆ.ಎಸ್. ಶಾಲಾ ಹಿರಿಯ ವಿದ್ಯಾರ್ಥಿ ತನ್ನ ನೆಚ್ಚಿನ ಶಿಕ್ಷಕನಿಗೆ ಶುಭ ಹಾರೈಸಿದರು. ಗೌರವ ಅತಿಥಿ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ವಾಲ್ಟರ್ ಮೋನಿಸ್, ಕಾರ್ಯದರ್ಶಿ ಗಿಲ್ಬಟ್ ಪಿಂಟೋ ಆಯೋಗಗಳ ಸಂಚಾಲಕಿ ಪೌಲಿನ್ ರೇಗೊ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಹಬೀಬ್ ಉಪಸ್ಥಿತರಿದ್ದರು. ಸಹ ಶಿಕ್ಷಕಿ ಉಷಾ ನಾಯಕ್ ಸ್ವಾಗತಿಸಿದರು .ಹೆಲನ್ ತಾವ್ರೊ ಸನ್ಮಾನ ಪತ್ರ ವಾಚಿಸಿದರು. ಸನ್ಮಾನಿತರ ಬಗ್ಗೆ ಮುಖ್ಯೋಪಾಧ್ಯಾಯನಿ ರೆನ್ನಿವಾಸ್ ಅನಿಸಿಕೆಗಳನ್ನು ಹಂಚಿಕೊಂಡರು. ಜೂಲಿಯೆಟ್ ಮತ್ತು ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು. ಬಸವರಾಜ್ ವಂದಿಸಿದರು.









