






ಮುಂಡಾಜೆ: ನಿಡಿಗಲ್ ಕಲ್ಮoಜ ಗ್ರಾಮ ಪಂಚಾಯತ್ ಬಳಿ ಕಳೆದ ಹಲವಾರು ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ಬರುತ್ತಿರುವ ಶ್ರೀ ದುರ್ಗಾ ವುಡ್ ಇಂಡಸ್ಟ್ರೀಸ್ ಇದರ ಸಹಸಂಸ್ಥೆ ಶ್ರೀ ದುರ್ಗಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್‌ನ ನೂತನ ಶೋರೂಂನ ಪ್ರಾರಂಭೋತ್ಸವವು ಮುಂಡಾಜೆ ಸೋಮಂತಡ್ಕದಲ್ಲಿ ಡಿ.21 ರಂದು ಉದ್ಘಾಟನೆಗೊಂಡಿದೆ.


ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರಾದ ಶರತ್‌ಕೃಷ್ಣ ಪಡುವೆಟ್ನಾಯ ಅವರು ಉದ್ಘಾಟಿಸಿ ಈ ಉದ್ಯಮ ಯಶಸ್ವಿಯಾಗಲಿ. ಕಾರ್ಯಕ್ರಮದಲ್ಲಿ ಲಕ್ಷ್ಮಿ ಇಂಡಸ್ಟ್ರೀಸ್ ಕನಸಿನ ಮನೆ ಉಜಿರೆ ಮಾಲಕ ಮೋಹನ್ ಕುಮಾರ್, ಉಜಿರೆ ಶ್ರೀ ಶಾರದಾ ಜುವೆಲ್ಲರ್ಸ್ ನ ಆನಂದ ಆಚಾರ್ಯ, ಚಂದ್ರಾವತಿ ಸೋಮಂತ್ತಡ್ಕ, ಪಂಚಶ್ರೀ ಎಂಟರ್ಪ್ರೈಸಸ್ ಮಾಲಕಿ ಚಂದ್ರಾವತಿ ನಾರಾಯಣ ಗೌಡ, ಬ್ಯಾಂಕ್ ಆಫ್ ಬರೋಡ ಮುಂಡಾಜೆ ಮ್ಯಾನೇಜರ್ ಜೆಗತ ಎ., ಗ್ರಾ.ಪಂ ಅಧ್ಯಕ್ಷ ಗಣೇಶ್ ಬಂಗೇರ, ಉಜಿರೆ ಹಳ್ಳಿಮನೆ ಪ್ರವೀಣ್ ಫೆರ್ನಾಂಡೀಸ್, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಸಂಪತ್ ಬಿ. ಸುವರ್ಣ, ದೆಹಲಿ ಉದ್ಯಮಿ ಪ್ರಭಾಕರ ಶೆಟ್ಟಿ, ಗುತ್ತಿಗೆದಾರ ಚೆನ್ನಕೇಶವ, ಸೋಮಂತಡ್ಕ ಹಾ.ಉ.ಸ ಸಂಘದ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ ಹಾಗೂ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು. ಉದ್ಘಾಟನೆ ಪ್ರಯುಕ್ತ ಅದೃಷ್ಟ ಯೋಜನೆ ಪ್ರಾರಂಭಿಸಿದ್ದು ಸದಸ್ಯರಾಗಲು ಸುವರ್ಣ ಅವಕಾಶವಿದೆ.
ಶೋ ರೂಮ್ ನ ವೈಶಿಷ್ಟ್ಯಗಳು: ಇಲ್ಲಿ ಎಲ್ಲ ಕಂಪನಿಗಳ ಟಿವಿ, ಫ್ರಿಡ್ಜ್, ವಾಷಿಂಗ್ ಮೆಸಿನ್, ಮಿಕ್ಸಿ, ಗ್ರೈಂಡರ್, ಕಾಟ್, ಡೈನಿಂಗ್ ಟೇಬಲ್, ಕಪಾಟು, ಫ್ಯಾನ್, ಇನ್ನಿತರ ಗ್ರಾಹೋಪಯೋಗಿ ಉತ್ಪನ್ನಗಳು ನಿಮ್ಮ ಕೈಗೆಟಾಕುವ ದರದಲ್ಲಿ ಲಭ್ಯ ವಿದೆ ಎಂದು ಸಂಸ್ಥೆಯ ಮಾಲಕರಾದ ಶ್ರೀಮತಿ ಪುಷ್ಪ ಮತ್ತು ಪುರುಷೋತ್ತಮ ಆಚಾರ್ಯ, ವೈಶಾಖ್ ಆಚಾರ್ಯ, ವೈದಿಕ್ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









