ಪ್ರಸಕ್ತ ವರ್ಷ 5 ಕೋಟಿ ರೂ.ಗೂ ಅಧಿಕ ಮೊತ್ತದ ಉಚಿತ ಔಷಧ ಹಾಗೂ ಚಿಕಿತ್ಸೆ- ಒಂದು ಕೋಟಿಗೂ ಮಿಕ್ಕ ವೆಚ್ಚದ ಉಚಿತ ಡಯಾಲಿಸಿಸ್ ನೀಡಿದ ಹೆಗ್ಗಳಿಕೆಗೆ ಪಾತ್ರವಾದ ಉಜಿರೆ ಎಸ್.ಡಿ.ಎಂ ಆಸ್ಪತ್ರೆ

0

ಉಜಿರೆ: ಪ್ರಸಕ್ತ ವರ್ಷ 5 ಕೋಟಿ ರೂ.ಗೂ ಅಧಿಕ ಮೊತ್ತದ ಉಚಿತ ಔಷಧ ಹಾಗೂ ಚಿಕಿತ್ಸೆ, ಉಚಿತ ಶಿಬಿರ ಇತ್ಯಾದಿ ವೈದ್ಯಕೀಯ ಸೇವೆಗಳನ್ನು ಬಡ ರೋಗಿಗಳಿಗೆ ನೀಡಲಾಗಿದೆ ಎಂದು ಉಜಿರೆ ಎಸ್. ಡಿ. ಎಂ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಜನಾರ್ದನ್ ಹೇಳಿದರು.

ಅವರು ಆಸ್ಪತ್ರೆಯಲ್ಲಿ ಡಿ.19 ರಂದು ನಡೆದ ಪತ್ರಕರ್ತರ ಸ್ನೇಹಕೂಟ ಕಾರ್ಯಕ್ರಮದಲ್ಲಿ ಮುಂದಿನ ಯೋಜನೆಗಳು ಹಾಗೂ ಪ್ರಸಕ್ತ ವರ್ಷದ ಆಸ್ಪತ್ರೆಯ ಸಾಧನೆಗಳ ಪಕ್ಷಿನೋಟವನ್ನು ವಿವರಿಸಿದರು.

2025 ಜ.1ರಿಂದ ಉಚಿತ ಡಯಾಲಿಸಿಸ್ ಯೋಜನೆಯನ್ನು ಪ್ರಾರಂಭಿಸಿದ್ದು ಪ್ರತಿ ರೋಗಿಗೆ ತಿಂಗಳಿಗೆ 24 ಸಾವಿರ ರೂ.ಗಳಿಗೂ ಅಧಿಕ ಉಳಿತಾಯವಾಗುತ್ತದೆ. ನವೆಂಬರ್ ವರೆಗೆ 6,834 ಉಚಿತ ಡಯಾಲಿಸಿಸ್ ನೀಡಲಾಗಿದ್ದು ಇದಕ್ಕೆ ಒಂದು ಕೋಟಿ ರೂ. ಗಿಂತ ಅಧಿಕ ವೆಚ್ಚವಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಮತ್ತು ಕುಟುಂಬಸ್ಥರು ಲಾಭದ ದೃಷ್ಟಿ ಇಲ್ಲದೆ ಗ್ರಾಮೀಣ ಜನರಿಗೆ ಸೇವೆ ನೀಡಲು ಉಜಿರೆಯಲ್ಲಿ ಆಸ್ಪತ್ರೆ ಆರಂಭಿಸಿದೆ ಎಂದು ಹೇಳಿದರು.

ಈ ಆಸ್ಪತ್ರೆ ವತಿಯಿಂದ ಈ ವರ್ಷ 5 ಕೋಟಿ ರೂ.ಗೂ ಅಧಿಕ ಮೊತ್ತದ ಉಚಿತ ಔಷಧ ಹಾಗೂ ಚಿಕಿತ್ಸೆ ಸೇರಿದಂತೆ ವೈದ್ಯಕೀಯ ಸೇವೆಗಳನ್ನು ಬಡ ರೋಗಿಗಳಿಗೆ ನೀಡಲಾಗಿದೆ ಎಂದರು.
ಅದರ ಜೊತೆ ಜನರ ಬೇಡಿಕೆ ಮೇರೆಗೆ ಶೀಘ್ರದಲ್ಲಿ 7 ಕೋಟಿ ರೂ ಅಧಿಕ ಮೌಲ್ಯದ ಎಂಆರ್ ಐ ಸ್ಕ್ಯಾನಿಂಗ್ ಮೆಷಿನ್ ನ್ನು ಅಳವಡಿಸಲಾಗುವುದು ಎಂದು ಸತತ ಎರಡನೇ ಬಾರಿ ಆಸ್ಪತ್ರೆಗೆ ಎನ್. ಎ.ಬಿ.ಎಚ್. ಮಾನ್ಯತೆ ದೊರೆತಿದೆ.

ಆಸ್ಪತ್ರೆ ವತಿಯಿಂದ ವಿಮಾ ಸೌಲಭ್ಯಗಳು, ಉಚಿತ ಆರೋಗ್ಯ ತಪಾಸಣೆ ಶಿಬಿರಗಳು, ಉಚಿತ ವೈದ್ಯಕೀಯ ಸೇವೆ ಇತ್ಯಾದಿ ನೀಡಲಾಗುತ್ತಿದೆ. ಅತ್ಯಾಧುನಿಕ ವೈದ್ಯಕೀಯ ಸಲಕರಣೆಗಳನ್ನು ಹೊಂದಿರುವ ಆಸ್ಪತ್ರೆಯಲ್ಲಿ ವಿಶ್ವದಲ್ಲಿಯೇ ಮೊದಲ ಬೆನ್ನುಮೂಳೆ ಗೆಡ್ಡೆ ಮತ್ತು ಡ್ಯೂರಲ್ ದುರಸ್ತಿ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಇದರ ಜತೆ ವಕ್ರಪಾದ, ಲ್ಯಾಪ್ರೋಸ್ಕೋಪಿಕ್, ಇಷ್ಟೇ ಮಕ್ಕಳಿಗೆ ಲಾಪ್ರೊಸ್ಕೋಪಿಕ್ ಅಪೆಂಡಿಸೈಟಿಸ್, ಕ್ಯಾನ್ಸರ್ ಸರ್ಜರಿ ಮೊದಲಾದ ವಿಶಿಷ್ಟ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತಿದೆ ಎಂದರು.

ಆಸ್ಪತ್ರೆಯಿಂದ ಮೂರು ಸರಕಾರಿ ಮತ್ತು ಹತ್ತೊಂಬತ್ತು ಖಾಸಗಿ ವಿಮಾ ಕಂಪೆನಿಗಳ ಒಡಂಬಡಿಕೆಯಲ್ಲಿ 60ಕ್ಕೂ ಅಧಿಕ ಆರೋಗ್ಯ ವಿಮಾ ಯೋಜನೆಗಳ ಮೂಲಕ ನಗದುರಹಿತ ಚಿಕಿತ್ಸಾ ಸೌಲಭ್ಯ ಸಂಪೂರ್ಣ ಸುರಕ್ಷಾ ವಿಮೆಯಲ್ಲಿ ಹೊರರೊಗಿ ವಿಭಾಗದಲ್ಲಿ ಉಚಿತ ವೈದ್ಯಕೀಯ ಸೇವೆ ನೀಡುವ ಏಕೈಕ ಆಸ್ಪತ್ರೆ ಇದಾಗಿದೆ. ಉಚಿತ ಆರೋಗ್ಯ ತಪಾಸಣೆ ಶಿಬಿರಗಳು, ಉಚಿತ ವೈದ್ಯಕೀಯ ಸೇವೆ ಇತ್ಯಾದಿ ನೀಡಲಾಗುತ್ತಿದೆ. ಅತ್ಯಾಧುನಿಕ ವೈದ್ಯಕೀಯ ಸಲಕರಣೆಗಳನ್ನು ಹೊಂದಿರುವ ಆಸ್ಪತ್ರೆಯಲ್ಲಿ ವಿಶ್ವದಲ್ಲಿಯೇ ಮೊದಲ ಬೆನ್ನುಮೂಳೆ ಗೆಡ್ಡೆ ಮತ್ತು ಡ್ಯೂರಲ್ ದುರಸ್ತಿ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಇದರ ಜತೆ ವಕ್ರಪಾದ, ಲ್ಯಾಪ್ರೋಸ್ಕೋಪಿಕ್, ಮಕ್ಕಳಿಗೆ ಲಾಪ್ರೊಸ್ಕೋಪಿಕ್ ಅಪೆಂಡಿಸೈಟಿಸ್‌, ಕ್ಯಾನ್ಸರ್ ಸರ್ಜರಿ ಮೊದಲಾದ ವಿಶಿಷ್ಟ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತಿದೆ ಎಂದರು.

ಆಸ್ಪತ್ರೆಯಲ್ಲಿ ನಾಲ್ಕು ಅಪರೇಷನ್ ಥಿಯೇಟರ್‌ಗಳಿದ್ದು, ಇನ್ನೊಂದು ಥಿಯೇಟರ್‌ನ ಅಗತ್ಯ ಇರುವುದರಿಂದ ರೋಗಿಗಳ ಅನುಕೂಲಕ್ಕಾಗಿ ಹೊರರೋಗಿ ವಿಭಾಗದ ವಿಸ್ತರಿತ ಕಟ್ಟಡದಲ್ಲಿ ಒಂದು ಅಪರೇಷನ್ ಥಿಯೇಟ‌ರ್ ಆಗುತ್ತದೆ. ಜೊತೆಗೆ ವೈದ್ಯರಿಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಸುಸಜ್ಜಿತ ವ್ಯವಸ್ಥೆಗಳಿರುವ ನೊಲೇಜ್ ರೂಮ್‌ವೊಂದು ಕೂಡಾ ಆಗಲಿದೆ. ನಮ್ಮ ಆಸ್ಪತ್ರೆಯಲ್ಲಿ 50ಕ್ಕೂ ಅಧಿಕ ಸ್ಪೆಷಾಲಿಟಿ ಮತ್ತು ಸೂಪರ್ ಸ್ಪೆಷಾಲಿಟಿ ವೈದ್ಯರು, ಉನ್ನತ ಅರ್ಹತೆ ಅನುಭವ ಹೊಂದಿರುವ ದಾದಿಯರು ಇದ್ದಾರೆ ಎಂದು ತಿಳಿಸಿದರು.

ಮುಖ್ಯ ವೈದ್ಯಾಧಿಕಾರಿ ಡಾ. ಸಾತ್ವಿಕ್ ಜೈನ್ ಅವರು ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಯಾವುದೇ ಶಸ್ತ್ರಚಿಕಿತ್ಸೆ ನಡೆಸಲು ಬೇಕಾದ ಎಲ್ಲಾ ವ್ಯವಸ್ಥೆಗಳು ಇವೆ. ನಾಲ್ಕು ಅಪರೇಷನ್ ಥಿಯೇಟರ್‌ಗಳಿದ್ದು, ಲ್ಯಾಪ್ರೋಸ್ಕೋಪಿಕ್ ಹಿಸ್ಟರೆಕ್ಟಮಿ, ಅಪೆಂಡಿಸೈಟಿಸ್‌ ಶಸ್ತ್ರಚಿಕಿತ್ಸೆ, ಬಾಯಿ, ಅನ್ನನಾಳದ ಕ್ಯಾನ್ಸರ್ ಸರ್ಜರಿ, ಅತ್ಯಂತ ಕ್ಲಿಷ್ಟಕರವಾದ ಕರುಳಿನ ಕಾಯಿಲೆಯ ಅಪರೇಷನನ್ನು ಈ ಆಸ್ಪತ್ರೆಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸಿರುವುದು ವಿಶೇಷ ಸಾಧನೆಯಾಗಿದೆ. ಎಂಟು ವೆಂಟಿಲೇಟರ್ ಬೆಡ್, ಅಕ್ಸಿಜನ್‌ ಸೌಲಭ್ಯ ಐಸಿಯೂ ವ್ಯವಸ್ಥೆ, ತಜ್ಞ ವೈದ್ಯರ ತಂಡ ಈ ಆಸ್ಪತ್ರೆಯಲ್ಲಿದೆ ಎಂದು ವಿವರಿಸಿದರು.

ಆಸ್ಪತ್ರೆಯ ಸಿಬ್ಬಂದಿ ವರ್ಗ, ಬೆಳ್ತಂಗಡಿ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ತುಕರಾಮ್ ಬಿ., ಮೀಡಿಯ ಕ್ಲಬ್ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಉಪಾಧ್ಯಕ್ಷ ಸತೀಶ್‌ ಪೆರ್ಲ ಉಪಸ್ಥಿತರಿದ್ದರು. ವೈದ್ಯಕೀಯ ಅಧಿಕ ದೇವೇಂದ್ರ ಕುಮಾರ್ ಪಿ., ಫೈನಾನ್ಸ್ ಆಫೀಸರ್ ನಾರಾಯಣ ಬಿ. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here