ಬಳಂಜ: “ಮಕ್ಕಳ ತಂಗುದಾಣ” ನಿರ್ಮಾಣ: ಶಾಸಕ ಹರೀಶ್ ಪೂಂಜರಿಗೆ ಅಭಿನಂದನೆ

0

ಬಳಂಜ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದ ಪ್ರಯುಕ್ತ ಅಲ್ಲಿನ ಶಾಲಾಭಿವೃದ್ಧಿ ಸಮಿತಿಯವರು ಶಾಸಕರನ್ನು ಭೇಟಿಯಾಗಿ ಶಾಲಾ ಬಳಿ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ “ಮಕ್ಕಳ ತಂಗುದಾಣ” ವನ್ನು ನಿರ್ಮಿಸಲು ಅನುದಾನ ಒದಗಿಸುವಂತೆ ವಿಜ್ಞಾಪನೆಯನ್ನು ನೀಡಿದ್ದು, ವಿಚಾರವನ್ನು ಪರಿಗಣಿಸಿ ಸಕರಾತ್ಮಕವಾಗಿ ಕೂಡಲೇ ಸ್ಪಂದಿಸಿದ ಶ್ರಮಿಕ ವಿದ್ಯಾರ್ಥಿಗಳ ಸಮಸ್ಯೆಯನ್ನು ಮನಗಂಡು ವಿದ್ಯಾರ್ಥಿಗಳ ಸುರಕ್ಷತೆಗಾಗಿ ಮಕ್ಕಳ ತಂಗುದಾಣ ನಿರ್ಮಾಣಕ್ಕೆ ರೂ.10ಲಕ್ಷ ಅನುದಾನವನ್ನು ಒದಗಿಸಿ ಶೀಘ್ರವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಿದ್ದು, ಅಮೃತ ಮಹೋತ್ಸವ ಆಚರಣೆಯ ಸಂದರ್ಭದಲ್ಲಿಯೇ ಮಕ್ಕಳ ತಂಗುದಾಣವೂ ಉದ್ಘಾಟನೆಗೆ ಲಭ್ಯವಾಗುವಲ್ಲಿ ಶ್ರಮಿಸಿದ ತಾಲೂಕಿನ ಶಾಸಕ ಹರೀಶ್ ಪೂಂಜರವರಿಗೆ ಶಾಲಾ ಮಕ್ಕಳ, ಪೋಷಕರ, ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ಶಾಲಾಭಿವೃದ್ಧಿ ಸಮಿತಿಯ ಪರವಾಗಿ ವಿಶೇಷ ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here