ಓಡಿಲ್ನಾಳ: ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮ

0

ಓಡಿಲ್ನಾಳ: ಸ. ಉ. ಪ್ರಾ. ಶಾಲೆಯಲ್ಲಿ 2025-26ನೇ ಸಾಲಿನ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮ ಡಿ. 14ರoದು ಶಾಲಾ ಎಸ್. ಡಿ. ಎಮ್. ಸಿ ಅಧ್ಯಕ್ಷ ಸಂತೋಷ್ ಶೆಟ್ಟಿ ಮದ್ದಡ್ಕ
ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಕಾರ್ಯಕ್ರಮವನ್ನು ರಾಜೇಂದ್ರ ಭಟ್ ಮುಖ್ಯ ಶಿಕ್ಷಕರು ಸರಕಾರಿ ಪ್ರೌಢಶಾಲೆ ನಾವೂರು ಅವರು ಉದ್ಘಾಟಿಸಿ, ತಾನು ಈ ಶಾಲೆಯ ಹಿರಿಯ ವಿದ್ಯಾರ್ಥಿ ಎಂಬ ಹೆಮ್ಮೆಯನ್ನು ವ್ಯಕ್ತಪಡಿಸುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತೀ ಶೆಟ್ಟಿ, ಪಂಚಾಯತ್ ಪ್ರತಿನಿಧಿ ಆನಂದಿ, ಎಸ್. ಡಿ. ಎಂ. ಸಿ ಉಪಾಧ್ಯಕ್ಷೆ ನಸೀಮ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅರುಣ್ ಸುಮಿತ್, ಶಾಲಾ ದೈಹಿಕ ಶಿಕ್ಷಕ ಬೆಳ್ತಂಗಡಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಯರಾಜ್ ಜೈನ್, ಉಳ್ಳಾಲ ಮಂಗಳೂರು ನರ್ಸಿಂಗ್ ಕಾಲೇಜಿನ ಉಪ ಪ್ರಾಂಶುಪಾಲ ಕೆ. ಪಾಂಡಿರಾಜ್, ಪುಂಜಾಲಕಟ್ಟೆ ಪ್ರೌಢಶಾಲಾ ಶಿಕ್ಷಕ ಕೆ. ಧರಣೇಂದ್ರ ಜೈನ್, ಮಿತ್ತಬಾಗಿಲು ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಗೋಪಾಲ್, ಪುಂಜಾಲಕಟ್ಟೆ ಕ್ಲಸ್ಟರ್ ನ ಸಿ.ಆರ್.ಪಿ. ಚೇತನ, ನಿವೃತ್ತ ಮುಖ್ಯ ಶಿಕ್ಷಕಿ ಫೆಲ್ಸಿ ಫಾತಿಮಾ ಮೋರಸ್, ಉಷಾ ಪಿ., ಎಸ್. ಡಿ. ಎಮ್. ಸಿ ನಿಕಟಪೂರ್ವ ಅಧ್ಯಕ್ಷ ರಾಜಪ್ರಕಾಶ್ ಶೆಟ್ಟಿ ಪಡ್ಡೆಲು, ವಿದ್ಯಾರ್ಥಿ ನಾಯಕ ಕೆ.ಎನ್. ನಂದನ್ ಶರ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಕ್ಷಿತ್ ಶಿವರಾಂ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು.

ವರ್ಗಾವಣೆಗೊಂಡ ಶಿಕ್ಷಕಿ ಸುಜಾತ, ಎಸ್. ಡಿ. ಎಂ. ಸಿ ನಿಕಟಪೂರ್ವ ಅಧ್ಯಕ್ಷೆ ಪ್ರಮೀಳ ಶೆಟ್ಟಿ ಅವರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಗೌರವ ಶಿಕ್ಷಕಿ ಸುಮತಿ ಬಿ.ಜೆ., ನಿವೃತ್ತ ಆಶಾ ಕಾರ್ಯಕರ್ತೆ ಲಕ್ಷ್ಮಿ, ಅಜಯ್ ಕೆ. (ಎನ್. ಎo. ಎo. ಎಸ್. ಪರೀಕ್ಷಾ ಉತ್ತೀರ್ಣ ) ಮೊಹಮ್ಮದ್ ಬಿಲಾಲ್ ( ಕಬಡ್ಡಿ ಕ್ರೀಡಾಪಟು )ಅವರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು.

ವರ್ಗಾವಣೆಗೊಂಡು ಕರ್ತವ್ಯಕ್ಕೆ ಸೇರಿದ ಜಯರಾಜ್ ಜೈನ್ ಅವರನ್ನು ವೇದಿಕೆಯಲ್ಲಿ ಸ್ವಾಗತಿಸಲಾಯಿತು. ನoತರ ಏರoಗಲ್ಲು ಓಡಿಲ್ನಾಳ ಅoಗನವಾಡಿ ಪುಟಾಣಿಗಳಿಗೆ ಶಾಲಾ ವಿದ್ಯಾರ್ಥಿಗಳಿಗೆ ಸಾಂಸ್ಕ್ರತಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರೀಡಾ ಸ್ಪರ್ಧೆಗಳ ಬಹುಮಾನ ವಿತರಣೆ ನಡೆಯಿತು.

ಮಧ್ಯಾಹ್ನ ನoತರ ವಿದ್ಯಾರ್ಥಿಗಳ ಸಾoಸ್ಕ್ರತಿಕ ನೃತ್ಯವೈಭವ ಜರಗಿತು. ಶೌಫ ಮರಿಯಂ ಮತ್ತು ಬಳಗದವರು ಪ್ರಾರ್ಥನೆ ಗೈದರು. ಶಿಕ್ಷಕಿ ವಿಲ್ಮೆಟ್ ಸೆರಾವೊ ಸ್ವಾಗತಿಸಿ, ಮುಖ್ಯ ಶಿಕ್ಷಕ ಉಷಾ ಪಿ. ವರದಿ ಓದಿದರು. ಕಾರ್ಯಕ್ರಮ ಯಶಸ್ವಿಗೆ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಎಸ್. ಡಿ. ಎಂ. ಸಿ. ಸದಸ್ಯರು ಶಾಲಾ ಶಿಕ್ಷಕ ವೃಂದ ಹಾಗೂ ಊರಿನ ದಾನಿಗಳ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ಜರಗಿತು. ಶಾರದಾ ಮಣಿ ಮತ್ತು ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು‌. ಶಿಕ್ಷಕ ಜಯಾರಾಜ್ ಜೈನ್ ಧನ್ಯವಾದ ನೀಡಿದರು.

LEAVE A REPLY

Please enter your comment!
Please enter your name here