



ಉಜಿರೆ: ಸಂತ ಅಂತೋನಿ ಇಗರ್ಜಿಯ ಕಟ್ಟಡದ ನವೀಕರಣದ ಕಾಮಗಾರಿಗೆ ಸಹಾಯಧನವಾಗಿ ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘದಿಂದ ಒಂದು ಲಕ್ಷ ರೂಪಾಯಿಗಳ ಚೆಕ್ಕನ್ನು ಸಂಘದ ಅಧ್ಯಕ್ಷ ವಲೇರಿಯನ್ ರೊಡ್ರಿಗಸ್ ಅವರು ಧರ್ಮ ಕೇಂದ್ರದ ಧರ್ಮಗುರು ಅಬೆಲ್ ಲೋಬೋ ಅವರಿಗೆ ಸಂಘದ ಕಚೇರಿಯಲ್ಲಿ ಹಸ್ತಾಂತರಿಸಿದರು.


ಸಂಘದ ಉಪಾಧ್ಯಕ್ಷ ಅನಿಲ್ ಪ್ರಕಾಶ್ ಡಿಸೋಜ, ನಿರ್ದೇಶಕರಾದ ಸುನಿಲ್ ಸಂತೋಷ್ ಮೊರಾಸ್, ಅರುಣ್ ಸಂದೇಶ್ ಡಿಸೋಜ, ಗೀತಾ ಫೆಲ್ಸಿಯಾನಾ ಡಿಸೋಜ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಲ್ಸನ್ ನೆಲ್ಸನ್ ಮೋನಿಸ್, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಆಂಟನಿ ಫೆರ್ನಾಂಡಿಸ್, ಕಾರ್ಯದರ್ಶಿ ಲಿಗೋರಿ ವಾಜ್ ಉಪಸ್ಥಿತರಿದ್ದರು.









