



ಧರ್ಮಸ್ಥಳ: ಶ್ರೀ ಷಣ್ಮುಖ ಭಜನಾ ಮಂಡಳಿ ನಾರ್ಯ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಹಾಗೂ ಊರವರ ಸಹಕಾರದಿಂದ ಫೆ. 7ರಂದು ಸುಜ್ಞಾನ ಭವನ ನಾರ್ಯ ಅಂಗನವಾಡಿ ವಠಾರದಲ್ಲಿ ನಡೆಯುವ ತಾಲೂಕಿನ ಆಯ್ದ ವಿವಿಧ ಭಜನಾ ಮಂಡಳಿಗಳ ಭಜಕರರಿಂದ ಏಕಕಾಲದಲ್ಲಿ ನೃತ್ಯ ಭಜನಾ ಕಮ್ಮಟೋತ್ಸವ -2026 ಇದರ ಆಮಂತ್ರಣವನ್ನು ಡಾ. ಡಿ ವೀರೇಂದ್ರ ಹೆಗ್ಗಡೆಯವರು ಡಿ. 9ರಂದು ಬಿಡುಗಡೆಗೊಳಿಸಿ ಶುಭ ಹಾರೈಸಿದರು.





ಭಜನಾ ತಂಡದ ಗುರುಗಳಾದ ನಾಗೇಶ್ ಬಿ. ನೆರಿಯ, ಸುಬ್ರಹ್ಮಣ್ಯ ಪ್ರಸಾದ್, ವೀರೂ ಶೆಟ್ಟಿ, ಲಕ್ಷೀ ನಾರಾಯಣ ರಾವ್, ಪಾರ್ಶ್ವನಾಥ ಜೈನ್, ಮಹಾವೀರ ಜೈನ್ ಹಾಗೂ ಭಜನಾ ಮಂಡಳಿಯ ಅಧ್ಯಕ್ಷೆ ವಿದ್ಯಾ ಸುರೇಂದ್ರ, ಕಾರ್ಯದರ್ಶಿ ಸಂಧ್ಯಾ ಸುರೇಶ್, ಭಜನಾ ಕಮ್ಮಟೋತ್ಸವದ ಸಮಿತಿಯ ಅಧ್ಯಕ್ಷ ಮೋಹನ ಗೌಡ ಹಿಪ್ಪ,ಭಜನಾ ಮಂಡಳಿಯ ಸಂಚಾಲಕರಾದ ಸುರೇಂದ್ರ ನಾರ್ಯ, ಗೌರವ ಸಲಹೆಗಾರರಾದ ದೇಜಪ್ಪ ನಾಯ್ಕ, ಕೋಶಾಧಿಕಾರಿ ಹರ್ಷ ಹೆಗ್ಡೆ, ಜೊತೆ ಕಾರ್ಯದರ್ಶಿ ಮಾಲಿನಿ ಮತ್ತು ಸಮಿತಿಯ ಸದಸ್ಯರಾದ ಸುರೇಶ್ ಗೌಡ ಕಲ್ಕಾಜೆ, ಜಗದೀಶ್ ನಾರ್ಯ ಮತ್ತು ಭಜನಾ ಮಂಡಳಿಯ ಸದಸ್ಯರು, ಮಕ್ಕಳು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.









