



ಉಜಿರೆ: ಎಸ್. ಡಿ. ಎಂ. ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ‘ಪರೀಕ್ಷಾ ತಯಾರಿ, ಮಾನಸಿಕ ಸಿದ್ಧತೆ’ ಮಾಹಿತಿ ಕಾರ್ಯಕ್ರಮ ಕಾಲೇಜಿನ ಹೆಚ್.ಆರ್.ಡಿ. ತರಬೇತಿ ವಿಭಾಗದಡಿಯಲ್ಲಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಟಿ. ಏನ್. ಕೃಷ್ಣಮೂರ್ತಿ ಅವರು ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ತಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಮೂಲಕ ಪರೀಕ್ಷೆಗೆ ಮಾನಸಿಕ ತಯಾರಿಯ ಜೊತೆಗೆ ಪಠ್ಯವನ್ನು ಕರಗತಗೊಳಿಸಿಕೊಳ್ಳುವ ಕುರಿತಾಗಿ ಅಗತ್ಯ ಮಾಹಿತಿಯನ್ನು ಹಾಗೂ ಪರೀಕ್ಷೆ ಒತ್ತಡವಲ್ಲ ಸಂತೋಷದಾಯಕವಾಗುವ ರೀತಿ ಓದುವ ಬಗೆಗಳ ಬಗ್ಗೆ ಮಾಹಿತಿ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ವಹಿಸಿದ್ದರು. ಗಣಿತಶಾಸ್ತ್ರ ವಿಭಾಗದ ಉಪನ್ಯಾಸಕ ಕೃಷ್ಣಪ್ರಸಾದ್ ನಿರೂಪಿಸಿ, ವಂದಿಸಿದರು.









