ಬಂದಾರು: ನಿವೃತ್ತಿ ಹೊಂದಿದ ಪೆರ್ಲ-ಬೈಪಾಡಿ ಅಂಗನವಾಡಿ ಕಾರ್ಯಕರ್ತೆ ಎಂ. ಸೇಸಮ್ಮರವರಿಗೆ ಗೌರವಾರ್ಪಣೆ

0

ಬಂದಾರು: ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಗೌರವಾರ್ಪಣಾ ಸಮಿತಿ, ಪೆರ್ಲ ಬೈಪಾಡಿ, ಬಾಲ ವಿಕಾಸ ಸಮಿತಿ ಅಂಗನವಾಡಿ ಕೇಂದ್ರ, ಪೋಷಕರು ಮತ್ತು ಹಳೆ ವಿದ್ಯಾರ್ಥಿಗಳು, ಸ್ತ್ರೀ ಶಕ್ತಿ ಸಂಘಗಳು, ಅಂಗನವಾಡಿ ಕೇಂದ್ರ ಪೆರ್ಲ-ಬೈಪಾಡಿ ಮತ್ತು ವಿವಿಧ ಸಂಘ ಸಂಸ್ಥೆಗಳು ಹಾಗೂ ಊರವರ ಆಶ್ರಯದಲ್ಲಿ ಡಿ. 6ರಂದು ಅಂಗನವಾಡಿ ಕೇಂದ್ರ ಪೆರ್ಲ ಬೈಪಾಡಿ ವಠಾರದಲ್ಲಿ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು.

ಬಂದಾರು ಗ್ರಾಮದ ಪೆರ್ಲಬೈಪಾಡಿ ಅಂಗನವಾಡಿದಲ್ಲಿ ಸುಮಾರು 30ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸಿದ ಎಂ. ಸೇಸಮ್ಮ ಅವರು ಅ.31ರಂದು ನಿವೃತಿಗೊಂಡಿರುತ್ತಾರೆ. ಅವರಿಗೆ ಗೌರವಾರ್ಪಣೆ ಕಾರ್ಯಕ್ರಮ ನೆರವೇರಿತು. ಬಾಲವಿಕಾಸ ಸಮಿತಿ ಅಧ್ಯಕ್ಷೆ ಹೇಮಾವತಿಯವರು ದೀಪ ಬೆಳಗಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯರಾದ ಮಹಾಬಲ ಗೌಡ, ಹರೀಶ್ ಗೌಡ ಪರಪ್ಪಜೆ, ಬಂದಾರು ಗ್ರಾಮ ಪಂಚಾಯತ್ ಸದಸ್ಯೆ ಅನಿತಾ ಉದಯ ಕುರುಡoಗೆ, ಭಾರತಿ, ಬಂದಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಜ್ಯೋತಿ, ಆಶಾ ಕಾರ್ಯಕರ್ತೆ ರಾಜೀವಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇವಾಪ್ರತಿನಿಧಿ ಪ್ರಮೀಳಾ ಅವರು ಉಪಸ್ಥಿತರಿದ್ದರು.

ರೇಷ್ಮಾ, ಚೇತನ, ವಾಣಿ ವಿ. ಅವರು ಪ್ರಾರ್ಥನೆಗೈದರು. ಶೀನಪ್ಪ ಗೌಡ ಪರ್ಲಾರು ಮತ್ತು ಬಾಲಕೃಷ್ಣ ಗೌಡ ಪಾರೋಟ್ಟು ಅವರು ಭೋಜನದ ವ್ಯವಸ್ಥೆ ಮಾಡಿದರು. ಕಾರ್ಯಕ್ರಮದ ಯಶಸ್ವಿಗೆ ಬಾಲವಿಕಾಸ ಸಮಿತಿ, ಪೋಷಕ ವೃಂದ ಊರದಾನಿಗಳು, ಸಂಘ ಸಂಸ್ಥೆಗಳ ಸಹಕರಿಸಿದರು. ಬಂದಾರು ಶಾಲೆ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶಾರದಾ ವೈ ಸ್ವಾಗತಿಸಿ, ವಿಠಲ ಗೌಡ ಒಳಗುಡ್ಡೆ ನಿರೂಪಿಸಿದರು. ಪೆರ್ಲ -ಬೈಪಾಡಿ ಅಂಗನವಾಡಿ ಕಾರ್ಯಕರ್ತೆ ವಾಣಿ. ವಿ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here