ಎಕ್ಸಲೆಂಟ್ ಶಾಲಾ ವಾರ್ಷಿಕೋತ್ಸವ ಸಂಭ್ರಮ

0

ಬೆಳ್ತಂಗಡಿ: ಎಕ್ಸಲೆಂಟ್ ಶಾಲೆಯಲ್ಲಿ 2025- 26ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ವಾರ್ಷಿಕೋತ್ಸವವನ್ನು ಬಹಳ ವೈಭವಪೂರಿತವಾಗಿ ಆಚರಿಸಲಾಯಿತು. ಎಕ್ಸಲೆಂಟ್ ಶಾಲೆ ಹೆಸರಿಗೆ ತಕ್ಕಂತೆ ಎಕ್ಸಲೆಂಟ್ ಆಗಿ ಕ್ರಮಬದ್ಧರೀತಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಸಂಸ್ಥೆಯನ್ನು ಪ್ರಶಂಸಿ ಜೊತೆಗೆ ಸಿ.ಬಿ.ಎಸ್.ಇ ಪಠ್ಯಕ್ರಮ ಬದಲಾವಣೆಯಲ್ಲಿ ಶಿಕ್ಷಕರ ಭೋದನ ಶೈಲಿಯು ಬದಲಾಗುತ್ತಿದೆ, ಇದರ ಸಂಪೂರ್ಣ ಸದುಪಯೋಗ ಪಡೆದು ಪೋಷಕರು ಹೆಮ್ಮೆ ಪಡುವ ರೀತಿಯಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಬೇಕು ಎಂದು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಭುವನ ಜ್ಯೋತಿ ಶೈಕ್ಷಣಿಕ ಸಂಸ್ಥೆಗಳ ಅಧ್ಯಕ್ಷ ಪ್ರಶಾಂತ್ ಡಿಸೋಜರವರು ಅಭಿಪ್ರಾಯಪಟ್ಟರು.

ಅಂಕಗಳು ಮುಖ್ಯವಲ್ಲ, ಉತ್ತಮ ಸಂಸ್ಕಾರವು ಜೀವನದ ಉತ್ತುಂಗಕ್ಕೆ ಕರೆದುಕೊಂಡು ಹೋಗುತ್ತದೆ ಎಂದು ಮೈಸೂರು ಎಸ್.ಎಲ್.ವಿ. ಬುಕ್ ಏಜೆನ್ಸಿ ವ್ಯವಸ್ಥಾಪಕನಿರ್ದೇಶಕ ದಿವಾಕರ ದಾಸ್ ರವರು ತಿಳಿಸಿದರು. ಒತ್ತಡದಾಯಕ ಕಲಿಕೆಗಿಂತ ಆನಂದದಾಯಕ ಕಲಿಕೆಯು ಉತ್ತಮ ಸಾಧನೆ ಮಾಡಲು ಪೂರಕವಾಗುತ್ತದೆ ಎಂದು ಎಕ್ಸಲೆಂಟ್ ಸಿಬಿಎಸ್ಇ ಶಾಲೆಯ ಹಳೆಯ ವಿದ್ಯಾರ್ಥಿ ಶ್ರೀ ಶಿಶಿರ್ ಎಚ್ ಶೆಟ್ಟಿಯವರು ಅನಿಸಿಕೆ
ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎಕ್ಸಲೆಂಟ್ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ರವರು ಪೋಷಕರ ಬೆಂಬಲದಿಂದ ಎಕ್ಸಲೆಂಟ್ ಸಂಸ್ಥೆ ಅಭಿವೃದ್ಧಿ ಪಥದತ್ತ ಸಾಗಲು ಸಹಾಯಕವಾಗಿದೆ ಎಂದು
ಅಭಿಪ್ರಾಯಪಟ್ಟರು.ಸ್ವಯಂ ನಂಬಿಕೆ ಬದುಕಿಗೆ ಅತ್ಯಗತ್ಯ. ಮಿತಿಯನ್ನು ಗಮನಿಸದೆ ಸಾಧ್ಯತೆಯ ಕಡೆಗೆ ಗಮನಹರಿಸಬೇಕೆಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್ ರವರು ತಿಳಿಸಿದರು.

ಗಣ್ಯರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಸಿದರು. ಸಿಬಿಎಸ್ಇ ಪ್ರಾಂಶುಪಾಲ ಪ್ರಸಾದ್ ವಾರ್ಷಿಕ ವರದಿಯನ್ನು ಮಂಡಿಸಿದರು. ಪ್ರಶಾಂತ್ ಡಿಸೋಜಾ, ದಿವಾಕರ್ ದಾಸ್, ಎಂ. ಗಣೇಶ್ ಕಾಮತ್ ಮತ್ತು ಕೆಸೆಟ್, ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಶೇಕಡಾ 99.96, ಜೆ ಇ ಇ ಅಡ್ವಾಸ್ಡ್, ಕಾಮಿಡಿಕೆ ಪರೀಕ್ಷೆಯಲ್ಲಿ ಮೊದಲ ರ್‍ಯಾಂಕ್ ಗಳಿಸಿ ಸಂಸ್ಥೆಗೆ ಹೆಮ್ಮೆಯನ್ನು ತಂದುಕೊಟ್ಟ ಎಕ್ಸಲೆಂಟ್ ಸಿಬಿಎಸ್ಇ ಶಾಲೆಯ ಹಳೆಯ ವಿದ್ಯಾರ್ಥಿ ಶಿಶಿರ್ ಎಚ್. ಶೆಟ್ಟಿ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

2024 – 25ನೇ ಸಿಬಿಎಸ್ಇ ಬೋರ್ಡ್ ನಡೆಸಿದ ವಾರ್ಷಿಕ ಪರೀಕ್ಷೆಯಲ್ಲಿ ಶಾಲೆಯಲ್ಲಿ ಅತ್ಯಧಿಕ ಅಂಕಗಳಿಸಿದ ರುಚಿರ ಕುಂದರ್ ಮತ್ತು ಆಂತಿಯ ಶೈನಾ ಮಿರಾಂಡರವರನ್ನು ಗೌರವಿಸಲಾಯಿತು. ಶೈಕ್ಷಣಿಕ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.

ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದರು. ಕಾರ್ಯಕ್ರಮಕ್ಕೆ ಪೋಷಕರು ಆಗಮಿಸಿ ಕಾರ್ಯಕ್ರಮದ ಮೇರುಗನ್ನು ಇಮ್ಮಡಿಗೊಳಿಸಿದರು. ಕಾರ್ಯಕ್ರಮದಲ್ಲಿ ಆಡಳಿತ ನಿರ್ದೇಶಕ ಡಾ. ಬಿ. ಪಿ ಸಂಪತ್ ಕುಮಾರ್, ಸಿಬಿಎಸ್ಇ ಪ್ರಾಂಶುಪಾಲ ಪ್ರಸಾದ್, ಹಳೆ ವಿದ್ಯಾರ್ಥಿ ಶ್ರೀ ಶಿಶಿರ್, ಶಾಲಾ ನಾಯಕ ಶ್ರೀಕರ್ ಮತ್ತು ನಾಯಕಿ ನಿರೀಕ್ಷ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿ ಶ್ರೀಮತಿ ಹರ್ಷಿತ ನಿರೂಪಿಸಿ, ಸಿ.ಬಿ.ಎಸ್.ಸಿ ಸಂಯೋಜಕಿ ವಿಮಲ ಸ್ವಾಗತಿಸಿ, ವಿದ್ಯಾರ್ಥಿನಿ ನಿರೀಕ್ಷಾ ವಂದಿಸಿದರು.

LEAVE A REPLY

Please enter your comment!
Please enter your name here