ಲಾಯಿಲ: ಮಕ್ಕಳ ಗ್ರಾಮ ಸಭೆ

0

ಲಾಯಿಲ: ಗ್ರಾಮ ಪಂಚಾಯತ್‌ ಭಾರತ್‌ ಮಾತಾ ಸಭಾಭವನದಲ್ಲಿ ಡಿ.5ರಂದು ಪೂರ್ವಾಹ್ನ 10.30ಗಂಟೆಗೆ ಮಕ್ಕಳ ಗ್ರಾಮ ಸಭೆಯು ಜಯಂತಿ ಎಂ.ಕೆ. ಅವರ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡಿತು.

ಗ್ರಾ.ಪಂ ಉಪಾಧ್ಯಕ್ಷೆ ಸುಗಂಧಿ ಜಗನ್ನಾಥ, ಸದಸ್ಯರಾದ ಪ್ರಸಾದ್‌ ಶೆಟ್ಟಿ, ರೇವತಿ, ಪಂ. ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ಡಿ.ಪಿ., ಲೆಕ್ಕ ಸಹಾಯಕಿ ಸುಪ್ರಿತಾ ಶೆಟ್ಟಿ, ಮುಖ್ಯ ಅತಿಥಿಗಳಾಗಿ ಆರ್ಥಿಕ ಸಮಾಲೋಚನಕಾರರಾದ ಉಷಾ ಕಾಮತ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಲಲಿತಾ, ಶಾಲಾ ಶಿಕ್ಷಕರು, ಪಂ. ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಪ್ರಮುಖವಾಗಿ ಸಭೆಯ ಕೇಂದ್ರ ಬಿಂದುಗಳಾದ ಮಕ್ಕಳು ಉಪಸ್ಥಿತರಿದ್ದರು.

ಪ್ರಾಸ್ತಾವಿಕವಾಗಿ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ಮಕ್ಕಳ ಹಕ್ಕುಗಳು ಹಾಗೂ ಮಾನವ ಹಕ್ಕುಗಳ ಬಗ್ಗೆ ಉಷಾ ಕಾಮತ್‌ ಅವರು ಮಾಹಿತಿ ನೀಡಿದರು.

ಲಲಿತಾ ಅವರು ಮಕ್ಕಳಿಗೆ ವ್ಯಕ್ತಿತ್ವ ವಿಕಸನದ ಕುರಿತು ಮಾಹಿತಿ ನೀಡಿದರು. ಆಧ್ಯಕ್ಷರು ಮಕ್ಕಳಿಗೆ ಶುಭ ಹಾರೈಸಿದರು. ಹಾಗೂ ಸದಸ್ಯ ಪ್ರಸಾದ್‌ ಶೆಟ್ಟಿ ಅವರು ಮಕ್ಕಳಿಗೆ ಹಿತ ನುಡಿಗಳನ್ನಾಡಿದರು.

ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿದ ಕರ್ನೋಡಿ ಶಾಲಾ ವಿದ್ಯಾರ್ಥಿ ಮಹಮ್ಮದ್‌ ಮುರ್ಷಿದ್‌ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಮಕ್ಕಳ ಗ್ರಾಮ ಸಭೆಯ ಪೂರ್ವಾಭಾವಿಯಾಗಿ ಮಕ್ಕಳಿಗೆ ಚಿತ್ರಕಲೆ, ದೇಶ ಭಕ್ತಿ ಗೀತೆ ಸ್ಪರ್ಧೆ ಮತ್ತು ರಸಪ್ರಶ್ಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಮಕ್ಕಳ ಬೇಡಿಕೆಗಳನ್ನು ಸ್ವೀಕರಿಸಲಾಯಿತು. ಲವಲವಿಕೆಯಿಂದ ಮಕ್ಕಳ ಭಾಗವಹಿಸುವಿಕೆ ಕಾರ್ಯಕ್ರಮಕ್ಕೆ ಮೆರುಗು ತಂದು ಕೊಟ್ಟಿತು.

ಪಂಚಾಯತ್‌ ಲೆಕ್ಕ ಸಹಾಯಕಿ ಸುಪ್ರಿತಾ ಶೆಟ್ಟಿ ಅವರು ಕಾರ್ಯಕ್ರಮವನ್ನು ನಿರೂಪಿಸಿದ್ದು, ಬಿಲ್‌ ಕಲೆಕ್ಟರ್‌ ಆದ ಮೋಹನ್‌ ಇವರು ಧನ್ಯವಾದ ನೀಡಿದರು. ರಾಷ್ಟ್ರಗೀತೆಯೋದಿಗೆ ಗ್ರಾಮ ಸಭೆಯನ್ನು ಮುಕ್ತಾಯಗೊಳಿಸಲಾಯಿತು.

LEAVE A REPLY

Please enter your comment!
Please enter your name here