




ಮೇಲಂತಬೆಟ್ಟು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ತಾಲೂಕು ಮೇಲಂತಬೆಟ್ಟು ವಲಯದ ವಾತ್ಸಲ್ಯ ಸದಸ್ಯರಾದ ಪ್ರೇಮಾರವರ ವಾತ್ಸಲ್ಯ ಮನೆ ನಿರ್ಮಾಣದ ಕೆಲಸ ಡಿ. 4ರಂದು ಪ್ರಾರಂಭಿಸಲಾಯಿತು.


ಶ್ರೀ ಭಗವತಿ ದೇವಸ್ಥಾನದ ಆಡಳಿತ ಮೊಕ್ತೇಸರ ಯೋಗೀಶ್ ಪೂಜಾರಿ, ಯೋಜನಾಧಿಕಾರಿಯವ ಯಶೋಧರ, ಕೇಂದ್ರ ಒಕ್ಕೂಟದ ಅಧ್ಯಕ್ಷ ಸೀತಾರಾಮ, ಅಳದಂಗಡಿ ಒಕ್ಕೂಟದ ಮಾಜಿ ಅಧ್ಯಕ್ಷ ಮಂಜುನಾಥ್, ಹುನ್ಸೆಕಟ್ಟೆ ಒಕ್ಕೂಟ ಅಧ್ಯಕ್ಷ ದಯಾನಂದ, ಮೇಲ್ವಿಚಾರಕ ರಾಮಕುಮಾರ್, ರವಿ, ವಿಪತ್ತು ತಂಡ ನವಜೀವನ ಸಮಿತಿ ಒಕ್ಕೂಟದ ಸದಸ್ಯರು ಸೇವಪ್ರಾತಿನಿಧಿಗಳು ಮೇಸ್ತ್ರಿ ಶ್ರೀಧರ್ ರವರು ಹಾಗೂ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಧುರಾ ವಸಂತ್ ಸ್ಥಳೀಯರು ಉಪಸ್ಥಿತರಿದ್ದರು.









