




ಕಲ್ಮಂಜ: ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಡಿ.5ರಂದು ಲೋಕಾರ್ಪಣೆಗೊಳ್ಳಲು ಹಾಗೂ ಡಿ.4ರಂದು ಉಜಿರೆ ಯಿಂದ ನಡೆಯಲಿರುವ ಶೋಭಾ ಯಾತ್ರೆಗೆ ಸಿದ್ಧಗೊಂಡಿರುವ ನೂತನ ಶಿಲಾಮಯ ಧ್ವಜಸ್ಥಂಭಕ್ಕೆ ತೀರ್ಥ ಪ್ರೋಕ್ಷಣೆ ಹಾಗೂ ಪೂಜೆ ಬಜಗೋಳಿಯಲ್ಲಿ ಡಿ. 3ರಂದು ನಡೆಯಿತು.


ಧ್ವಜಸ್ಥಂಭವನ್ನು ಕ್ಷೇತ್ರಕ್ಕೆ ಸಮರ್ಪಿಸಲಿರುವ ದಾನಿ ಸುಕನ್ಯಾ ಮತ್ತು ಡಿ. ಜಯರಾಮ ರಾವ್, ವೈನಿಕ್ ರಾವ್, ಶಿಲ್ಪಿ ಸುಧಾಕರ್ ಡೋಂಗ್ರೆ ಬಜಗೋಳಿ, ಪ್ರಮೋದ್ ಪ್ರಕೃತಿ ಸ್ಟೋನ್ಸ್ ಬಜಗೋಳಿ, ಕ್ಷೇತ್ರದ ಅರ್ಚಕ ರಾಜೇಶ್ ಹೊಳ್ಳ, ವೆಂಕಟರಮಣ ಹೆಬ್ಬಾರ್ ಪರಾರಿ,ಶ್ರೀಮತಿ ಆಶಾ ವಿ. ಹೆಬ್ಬಾರ್, ಜಯಂತ್ ರಾವ್ ಕೊತ್ತಳಿಗೆ, ವಿಷ್ಣು ಪಟವರ್ಧನ್, ಪ್ರದೀಪ್ ಚಿಪ್ಳುಣ್ಕರ್,ಸತೀಶ್ ರಾವ್, ಸುಬ್ರಮಣ್ಯ ಭಟ್ ಪಜೀರಡ್ಕ, ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಸುನಿಲ್ ಕನ್ಯಾಡಿ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ಗೌಡ, ಸಮಿತಿಯ ಸದಸ್ಯರಾದ ಗಂಗಾಧರ್ ಗೌಡ ಕರೀಂಬಿತ್ತಿಲ್, ಸಂತೋಷ್ ಕಡಂಬು, ಸುಂದರಿ, ಸದಾನಂದ ಮೂಡಾಯಿಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.









