




ನೆರಿಯ: ಕಕ್ಕಿಂಜೆ ಮುಖ್ಯ ರಸ್ತೆಯ ಬಸ್ತಿಯಲ್ಲಿ ಬೈಕ್ ಮತ್ತು ಈಕೋ ಕಾರು ಢಿಕ್ಕಿಯಾದ ಘಟನೆ ಡಿ. 3ರಂದು ರಾತ್ರಿ ಸುಮಾರು 7ಗಂಟೆಗೆ ನಡೆದಿದೆ


ನೆರಿಯದಿಂದ ಕಕ್ಕಿಂಜೆ ಕಡೆ ಹೋಗುತ್ತಿದ ಬೈಕ್ ಗೆ ಕಕ್ಕಿಂಜೆಯಿಂದ ನೆರಿಯ ಕಡೆಗೆ ಕಾರು ಸಂಚಾರಿಸುವಾಗ ಘಟನೆ ನಡೆದಿದೆ. ಸವಾರನಿಗೆ ಗಾಯವಾಗಿದ್ದು, ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೈಕ್ ಸವಾರ ಪುದುವೆಟ್ಟು ಗ್ರಾಮದ ಬಾಯಿತ್ಯಾರ್ ಬಳಿ ಸೇಲೂನ್ ನಡೆಸುತ್ತಿದ್ದ ನಾಗೇಶ್ ಅವರ ಪುತ್ರ ಬೈಕ್ ಸವಾರ ಶಿವಪ್ರಸಾದ್ ಎಂದು ಗುರುತಿಸಲಾಗಿದೆ.









