ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ವೇಣೂರು ಸ.ಪ.ಪೂ. ಕಾಲೇಜಿನ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಹಲವು ಬಹುಮಾನ

0

ವೇಣೂರು: ಕರ್ನಾಟಕ ಸರ್ಕಾರ ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರತಿ ವರ್ಷ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸಲು ನಡೆಸುವ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ವೇಣೂರು ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ವಿದ್ಯಾರ್ಥಿಗಳು ಪಡೆದುಕೊಂಡ ಬಹುಮಾನ ಪಡೆದುಕೊಂಡಿದ್ದಾರೆ.
1) ಶ್ರೀನಿಕಾ ಇಂಗ್ಲಿಷ್ ಭಾಷಣ ಪ್ರಥಮ
2) ಧನುಶ್ರೀ ಎಸ್. ಕುಲಾಲ್ ಕನ್ನಡ ಭಾಷಣ ಪ್ರಥಮ
3) ಅಮೋಘ ತುಳು ಭಾಷಣ ಪ್ರಥಮ
4) ತೇಜಸ್ವಿ ರಂಗೋಲಿ ಪ್ರಥಮ
5) ಧವಳ್ ಬಲ್ಲಾಳ್ ಚರ್ಚಾ ಸ್ಪರ್ಧೆ ಪ್ರಥಮ
6) ನರಸಿಂಹ ಕಾಮತ್ ಮತ್ತು ಪ್ರಾಪ್ತಿ ರಸಪ್ರಶ್ನೆ ದ್ವಿತೀಯ
7) ಧನುಶ್ರೀ ಎಸ್. ಕುಲಾಲ್ ಕವನ ವಾಚನ ತೃತೀಯ
8) ಅನಘ ಜೈನ್ ಗಜಲ್ ತೃತೀಯ
9) ಶರತ್ ಚಿತ್ರಕಲೆ ತೃತೀಯ ಬಹುಮಾನವನ್ನು ಪಡೆದುಕೊಳ್ಳುವುದರ ಜೊತೆಗೆ ಹೈಸ್ಕೂಲ್ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ತಾಲೂಕಿನಲ್ಲಿ ಪ್ರಥಮ ಸ್ಥಾನವನ್ನು ಪಡೆದ ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.

ವಿದ್ಯಾರ್ಥಿಗಳಿಗೆ ಉಪ ಪ್ರಾಂಶುಪಾಲರು, ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ SDMC ಮತ್ತು ಕಾರ್ಯಧ್ಯಕ್ಷರು ಮತ್ತು ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here